Home News ಹೆಂಡ್ತಿಯ ಕೂದಲು ಉದುರುತ್ತಿದೆ ಎಂದು ವಿಚ್ಛೇದನ ನೀಡಿದ ಪತಿ

ಹೆಂಡ್ತಿಯ ಕೂದಲು ಉದುರುತ್ತಿದೆ ಎಂದು ವಿಚ್ಛೇದನ ನೀಡಿದ ಪತಿ

Hindu neighbor gifts plot of land

Hindu neighbour gifts land to Muslim journalist

ಚರ್ಮರೋಗದಿಂದ ಉಂಟಾದ ಬೋಳು ಕಾರಣದಿಂದಾಗಿ ಚೀನಾದ ಮಹಿಳೆಯೊಬ್ಬಳ ಪತಿ ವಿಚ್ಛೇದನ ಪಡೆದಿರು ಘಟನೆ ನಡೆದಿದೆ. ಮಧ್ಯ ಹೆನಾನ್ ಪ್ರಾಂತ್ಯದ ಶಾಂಗ್ಕಿಯುನಲ್ಲಿ ವಾಸಿಸುವ 36 ವರ್ಷದ ಲಿ ಎಂಬ ಮಹಿಳೆ, ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದಾಗಿನಿಂದ ತನ್ನ ಪತಿ ತನ್ನನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾಗಿ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಲಿ ಪ್ರಕಾರ, ತಾನು ತನ್ನ ಕುಟುಂಬಕ್ಕೆ ಸಂಪೂರ್ಣವಾಗಿ ಸಮರ್ಪಿತಳಾಗಿದ್ದೇನೆ. ತನ್ನ ಮಗುವನ್ನು ನೋಡಿಕೊಂಡಿದ್ದು, ಬಟ್ಟೆ ಒಗೆದಿದ್ದು, ಅಡುಗೆ ಮಾಡಿದ್ದು, ಮತ್ತು ಇತರ ಮನೆಕೆಲಸಗಳನ್ನು ಮಾಡಿದ್ದೇನೆ. ತನ್ನ ಗಂಡನನ್ನು ನಿರ್ದಯಿ ಎಂದು ಹೇಳಿದ ಮಹಿಳೆ ಮತ್ತು ಅಂತಹ ಕಠಿಣ ವ್ಯಕ್ತಿಯನ್ನು ತಾನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾಳೆ.

ತನ್ನ ಗಂಡನ ನಡವಳಿಕೆಯಿಂದ ಹತಾಶೆಗೊಂಡು ಮತ್ತು ಆಗಾಗ್ಗೆ ಖಿನ್ನತೆಗೆ ಒಳಗಾಗಿದ್ದ ಲಿ ಮಾಧ್ಯಮದವರ ಸಹಾಯ ಯಾಚಿಸಿದ್ದಾಳೆ.

ಎರಡು ವರ್ಷಗಳ ಹಿಂದೆ, ಮಹಿಳೆಯ ಕೂದಲಿನ ಹೆಚ್ಚಿನ ಭಾಗವು ಇದ್ದಕ್ಕಿದ್ದಂತೆ ಬಿಳಿ ಬಣ್ಣಕ್ಕೆ ತಿರುಗಿ, ಚರ್ಮ, ಕೂದಲು ಮತ್ತು ಲೋಳೆಯ ಪೊರೆಗಳಲ್ಲಿ ವರ್ಣದ್ರವ್ಯವನ್ನು ಉಂಟುಮಾಡುವ ದೀರ್ಘಕಾಲದ ಚರ್ಮದ ಕಾಯಿಲೆಯಾದ ವಿಟಲಿಗೋವನ್ನು ವೈದ್ಯರು ಪತ್ತೆ ಮಾಡಿದರು. ಅಂದಿನಿಂದ ಅವಳ ಆಕೆ ವಯಸ್ಸಾದವಳ ರೀತಿ ಕಾಣಲು ಶುರುವಾಗಿದೆ.

ಲೀ ಅವರ ಪ್ರಕಾರ, ತನ್ನ ಪತಿ ತನ್ನ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಇಷ್ಟ ಪಡ್ತಿರಲಿಲ್ಲ. ತನ್ನ ಅನಾರೋಗ್ಯದ ಬಗ್ಗೆ ವಿಚಾರಿಸಲಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಪಾರ್ಟಿಗಳು ಅಥವಾ ಭೋಜನಗಳಿಗೆ ಕರೆದುಕೊಂಡು ಹೋಗಲು ನಿರಾಕರಣೆ ಮಾಡಿದ. 16 ವರ್ಷಗಳ ದಾಂಪತ್ಯದ ನಂತರ, ಲೀ ತನ್ನ ಪತಿಯ ವಿಚ್ಛೇದನದ ಪ್ರಸ್ತಾಪವನ್ನು ಸ್ವೀಕರಿಸಬೇಕಾಯಿತು. ಅವರ ಮಗುವಿನ ಪಾಲನೆಯನ್ನು ಅವರಿಗೆ ನೀಡಲಾಗಿದೆ. ಲೀ ಅವರ ಆರೋಪಗಳಿಗೆ ಅವರ ಪತಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಹೆನಾನ್‌ನಲ್ಲಿರುವ ಝೆಂಗ್‌ಝೌ ಲ್ಯುಕೋಡರ್ಮಾ ಆಸ್ಪತ್ರೆಯ ಹಿರಿಯ ವೈದ್ಯ ಲು ಮಂಚುನ್, ವಿಟಲಿಗೋ ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು ಮತ್ತು ಪ್ರಪಂಚದಾದ್ಯಂತ ಸುಮಾರು 0.5 ರಿಂದ 2 ಪ್ರತಿಶತದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸುತ್ತಾರೆ. ಲೀ ಅವರ ತಲೆಯ ಮೇಲಿನ ಲ್ಯುಕೋಡರ್ಮಾ ಮೊದಲಿಗೆ ತೀವ್ರವಾಗಿರಲಿಲ್ಲ, ಆದರೆ ಆತಂಕ, ಕೋಪ ಮತ್ತು ಇತರ ನಕಾರಾತ್ಮಕ ಭಾವನೆಗಳಿಂದಾಗಿ ಅದು ಹದಗೆಟ್ಟಿತು ಎಂದು ವೈದ್ಯರು ಹೇಳಿದ್ದಾರೆ. ಸಕಾರಾತ್ಮಕ ಮನಸ್ಥಿತಿ ಮತ್ತು ಉತ್ತಮ ಮನಸ್ಥಿತಿ ಈ ರೋಗವನ್ನು ನಿಯಂತ್ರಿಸಲು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅವರು ವಿವರಿಸುತ್ತಾರೆ.