

ಉರುವಾಲು: ಜ 25 ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು. ಉರುವಾಲು, ಕಣಿಯೂರು, ಬಂದಾರು ಗ್ರಾಮಗಳನ್ನೊಳಗೊಂಡ ಬಂದಾರು ಮಂಡಲ ಹಿಂದೂ ಸಂಗಮ ಕಾರ್ಯಕ್ರಮ ಜ.25 ರಂದು ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾಭವನ ದಲ್ಲಿ ನೆರವೇರಿತು.


ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಕುಣಿತ ಭಜನೆ, ಗೊಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಪ್ರಜ್ವಲನೆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮವಿಕಾಸ ಪ್ರಾಂತ ಸಂಯೋಜಕರಾದ ಜಗದೀಶ್ ಕಲ್ಲಡ್ಕರವರು ಪುರಾತನ ಭಾರತೀಯ ಸಂಸ್ಕೃತಿ ಮೇಲೆ ಹೇಗೆ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ಬೀರುತ್ತಿದೆ ಅದರಿಂದ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಹಿಂದೂ ಸಂಗಮ ಅತೀ ಅಗತ್ಯ ವೆಂದು ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.
ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹಿಂದೂ ಸಂಗಮ ದಿಂದಾಗಿ ಹಿಂದೂಗಳ ಮಧ್ಯೆ ಹೃದಯಗಳ ಬಂಧನವಾಗಬೇಕು. ಕಳೆದುಹೋದ ಸಂಸ್ಕೃತಿಯನ್ನು ಮತ್ತೆ ಮುಂದಿನ ಪೀಳಿಗೆಗೆ ಹೇಳಿಕೊಡುವಂತಾಗಬೇಕು ತಿಳಿಸಿ ಆಶೀರ್ವಚನ ನೀಡಿದರು, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಸಭಾಧ್ಯಕ್ಷತೆ ವಹಿಸಿದ್ದರು.


ಶಾಸಕ ಹರೀಶ್ ಪೂಂಜ, ಪಿಲಿಗೂಡು ಚಾಮುಂಡೇಶ್ವರಿ ಕ್ಷೇತ್ರ ಮೊಕ್ತೇಸರರಾದ ಪದ್ಮನಾಭ ಶಿಲ್ಪಿ, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ, ಉರುವಾಲು ಮಾತೃ ಮಂಡಳಿ ಸದಸ್ಯರಾದ ಶ್ರೀಮತಿ ಸುಮತಿ ಜನಾರ್ಧನ, ಕಣಿಯೂರು ಮಹಮ್ಮಾಯಿ ದೇವಸ್ಥಾನ ಅಧ್ಯಕ್ಷರಾದ ಬಾಬು ನಾಯ್ಕ್ ಮೈಪಾಜೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶಾರದಾ ಆರ್.ರೈ, ದೈವ ಆರಾಧಕರು, ಧಾರ್ಮಿಕ ಕಾರ್ಯಕರ್ತರಾದ ಗಣೇಶ್ ಮಳೆಬರಿ,ಕುರಾಯ ಶ್ರೀ ಸದಾಶಿವ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಬಾಬು ಗೌಡ ಮಡ್ಯಲಖಂಡ, ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷರಾದ ರಾಮಣ್ಣ ಮಡಿವಾಳ, ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು, ಮಲೆoಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ಸದಾನಂದ ಮೇಲಾoಟ, ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು,ಬೆಳ್ತಂಗಡಿ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷರಾದ ಅಜಿತ್ ಜಿ ಶೆಟ್ಟಿ ಕೊರ್ಯಾರು, ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಮರಕ್ಕಡ, ಬಂದಾರು ಮಂಡಲ ಸಂಯೋಜಕರಾದ ಉದಯ್ ಕುಮಾರ್ ಬಿ. ಕೆ, ಆಯೋಜನ ಸಮಿತಿ ಉಪಾಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಜೊತೆ ಕಾರ್ಯದರ್ಶಿ ರೋಹಿತ್ ಶೆಟ್ಟಿ ಕುಪ್ಪೆಟ್ಟಿ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಾಧಕರು, ಅಯೋಧ್ಯಾ ಕರಸೇವಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು, ಸ್ಮೃತಿ ಕೊರಿಂಜ ಪ್ರಾರ್ಥನೆಗೈದು, ಕು ಕುಸುಮ ವಂದೇ ಮಾತರಂ ಗೀತೆ ಹಾಡಿದರು, ಉದಯ್ ಕುಮಾರ್.ಬಿ.ಕೆ ಸ್ವಾಗತಿಸಿ, ಕೆ.ಪಿ. ನವೀನ್ ಕುಮಾರ್ ಜೈನ್ ನಿರೂಪಿಸಿ, ವಸಂತ ಮರಕ್ಕಡ ಧನ್ಯವಾದವಿತ್ತರು. ಕಣಿಯೂರು, ಬಂದಾರು, ಉರುವಾಲು ಗ್ರಾಮದ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.













