

ಅರಸಿನಮಕ್ಕಿ: ಮಂಡಲದ ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ ಗ್ರಾಮಗಳ ಹಿಂದೂ ಸಂಗಮ ಕಾರ್ಯಕ್ರಮ ಕೇಂದ್ರ ಮೈದಾನದಲ್ಲಿ ವೈಭವಯುತವಾಗಿ ಜ. 25ರಂದು ನಡೆಯಿತು.
ಹಿಂದೂ ಸಂಗಮ ಅರಸಿನಮಕ್ಕಿ ಮಂಡಲದ ಆಯೋಜನ ಸಮಿತಿಯ ಸಂಯೋಜಕ ರಾಘವೇಂದ್ರ ನಾಯಕ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕುಟುಂಬ ಪ್ರಭೋದನ್ ವಿಭಾಗ ಸಂಯೋಜಕ್ ಗುರುರಾಜ್ ಕೋಟೇಶ್ವರ ಮಾತನಾಡಿ ಅವಿಭಕ್ತ ಕುಟುಂಬ ನಮ್ಮ ಧರ್ಮದ ಶಕ್ತಿ ಕುಟುಂಬದಲ್ಲಿ ಯಾರು ಬೇರೆ ಬೇರೆಯಾಗದೆ ಒಟ್ಟಿಗೆ ಬಾಳಬೇಕು ನಗರ ವ್ಯಾಮೋಹದಿಂದ ವಿಚ್ಚೇದನ ಹೆಚ್ಚಾಗುತ್ತಿದೆ, ಇದು ಹಿಂದೂ ಧರ್ಮಕ್ಕೆ ಮಾರಕ ಎಂದು ಹೇಳಿದರು. ಸ್ಥಳೀಯ ಧಾರ್ಮಿಕ ಮುಖಂಡ ವಾಮನ ತಾಮನ್ಮರ್, ಚೇತನ ಚಂದ್ರಶೇಖರ, ದಿನೇಶ್ ಚಾರ್ಮಾಡಿ, ಅಶೋಕ್ ಪತ್ತಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರಸಿನಮಕ್ಕಿ ಮಂಡಲದ ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿಯಿಂದ ಭಾಗವಹಿಸಿದ ಪ್ರತಿ ಮನೆಯವರಿಗೂ ಭಗವದ್ಗೀತೆ ಪ್ರತಿಗಳನ್ನು ವಿತರಿಸಿದರು.













