Home News ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ, ಜ.26: ಜಗತ್ತಿಗೆ ಸಂಸ್ಕೃತಿ, ಸಂಸ್ಕಾರ ಸೇರಿದಂತೆ ಎಲ್ಲವನ್ನು ನೀಡಿದ ದೇಶ ಭಾರತವಾಗಿದೆ. ಇಂದು ಪ್ರಪಂಚದ ಎಲ್ಲ ದೇಶಗಳಿಗೆ ಭಾರತದ ಪ್ರಾಮುಖ್ಯತೆ ತಿಳಿಯುವ ಮೂಲಕ ಅಖಂಡ ಭಾರತದ ಕನಸು ನನಸಾಗಿದೆ ಎಂದು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಗುರುವಾಯನಕೆರೆ ಶಕ್ತಿನಗರ ವಿದ್ವತ್ ಪಿಯು ಕಾಲೇಜಿನಲ್ಲಿ ಜ.26 ರಂದು ಜರಗಿದ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜವನ್ನು ಹಾರಿಸಿ ಬಳಿಕ ನಡೆದ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಇಂದು ದೇಶದ ಭವಿಷ್ಯ ಪ್ರಕಾಶಮಾನವಾಗುವಲ್ಲಿ ನಾವೆಲ್ಲ ಜಾತಿ, ಪ್ರಾಂತ್ಯವಾರು ಹೊರತು ಪಡಿಸಿ ಚಿಂತಿಸಬೇಕಿದೆ. ಭಾರತ ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಕೃತಿಯ ಬಗ್ಗೆ ಅಪಾರ ಜ್ಞಾನ ಪಡೆಯುವುದಲ್ಲದೆ, ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯವಾಗಬೇಕು. ತನ್ಮೂಲಕ ಸಂವಿಧಾನದ ಜವಾಬ್ದಾರಿಗಳನ್ನು ಅರಿತುಕೊಳ್ಳೋಣ ಎಂದು ಸಂದೇಶ ನೀಡಿದರು.

ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ನೀಲಕಂಠ ಅವರು ಮಾತನಾಡಿ, ಭಾರತವು ಜನವರಿ 26, 1950 ರಂದು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು, ಬ್ರಿಟಿಷ್ ಕಾನೂನುಗಳನ್ನು ಬದಲಾಯಿಸಿ, ಸಾರ್ವಭೌಮ, ಪ್ರಜಾಪ್ರಭುತ್ವ, ಗಣರಾಜ್ಯ ರಾಷ್ಟ್ರವಾಗಿ ರೂಪುಗೊಂಡ ದಿನವಾಗಿದೆ. ಇದು ಸ್ವಾತಂತ್ಯ್ಯಕ್ಕಿಂತ ಭಿನ್ನವಾಗಿ, ದೇಶದ ಕಾನೂನು ಆಧಾರ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಾದ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ಎತ್ತಿ ತೋರಿಸುವಂತದಾಗಿದೆ. ನಾಗರಿಕರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಲು ಇದು ಪ್ರಮುಖ ದಿನವಾಗಿದೆ ಎಂದರು.

ವೇದಿಕೆಯಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಕೋಶಾಧಿಕಾರಿ ಕಾಶಿನಾಥ್ ಭಟ್, ಟ್ರಸ್ಟಿ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ, ಆಡಳಿತಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಹರೀಶ್ ಕೆ.ಆರ್., ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರತಿಜ್ಞಾ ನಿರೂಪಿಸಿದರು.