

ಮಡಂತ್ಯಾರು :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಅಂಗವಾಗಿ ಮಡಂತ್ಯಾರು ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ಜ. 25 ಭಾನುವಾರದಂದು ನಡೆಯಿತು.

ಸಂಜೆ 4 ಗಂಟೆಗೆ ಸರಿಯಾಗಿ ಮಡಂತ್ಯಾರು ಗಣಪತಿ ಮಂಟಪದಲ್ಲಿ ಪಾರೆಂಕಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್ ಭಟ್ ಪೇಜಾವರ ಇವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯ ಮುಖೇನ ಶೋಭಾಯಾತ್ರೆಯ ಪ್ರಾರಂಭಗೊಂಡು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ನಂತರ ಬಸವನಗುಡಿ ಪಂಚಕಟ್ಟೆ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ತಯಾರಿಸಿದ ವೇದಿಕೆಯ ಎದುರು ದೀಪಂ ಜ್ಯೋತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎಂ ಪುಂಜಾಲ್ಕಟ್ಟೆ ಅವರು ಕಾರ್ಯಕರ್ತ ಬಂಧುಗಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ಥಳೀಯ ಯುವ ಪ್ರತಿಭೆಗಳಿಂದ ಮೈನವೀರೆಳಿಸುವ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ತದನಂತರ ವೇದಿಕೆಯಲ್ಲಿ ಮಡಂತ್ಯಾರು ಮಂಡಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಲಾಯಿತು.
ವೇದಿಕೆಯ ಮುಂಭಾಗದಲ್ಲಿ ಭಾರತೀಯ ಜೀವನ ಪದ್ಧತಿಯ ಹೃದಯ ಕೃಷಿ ಆರೋಗ್ಯ ಮತ್ತು ಸ್ವಾವಲಂಬನೆಯ ಸಂಕೇತವಾಗಿರುವ ಸ್ವದೇಶಿ ಗೋವಿಗೆ ಪೂಜಿಸಲಾಯಿತು ಮತ್ತು ಗೋವಿನ ಆಶೀರ್ವಾದ ಪಡೆಯಲಾಯಿತು
ಸಭಾ ಕಾರ್ಯಕ್ರಮವು ಪ್ರಾರಂಭಗೊಂಡು ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಮುಖ ವಕ್ತಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಸಹ ಕಾರ್ಯವಾಹ ಸುಧೀರ್ ಸಿದ್ದಾಪುರ , ಮುಖ್ಯ ಅತಿಥಿಗಳಾಗಿ ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ. ರವಿ ನಡುಬೊಟ್ಟು , ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುನೀತ್ ಕುಮಾರ್, ಪುಂಜಾಲಕಟ್ಟೆ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್ ಪ್ರಭು , ಮಾಣೂರು ಸಪರಿವಾರ ಶಾಸ್ತರ ದೇವಸ್ಥಾನದ ಅಧ್ಯಕ್ಷರಾದ ಹೊನ್ನಪ್ಪ ಕುಲಾಲ್ , ಮಾರಿಗುಡಿ ಶ್ರೀ ಮಾರಿಕಾಂಬ ದೇವಸ್ಥಾನದ ಸುಧೀರ್ ಪಡಿವಾಳ್, ಮಡಂತ್ಯಾರ್ ರಾಘವೇಂದ್ರ ಮಠ ಆಡಳಿತ ಮೊಕ್ತಸರರಾದ ಸ್ವರ್ಣ ಲತಾ ಹೆಗ್ಡೆ, ನವುಂಡ ಶ್ರೀ ನಾಗಬ್ರಹ್ಮ ಕ್ಷೇತ್ರದ ಆಡಳಿತ ಮೊತ್ತೇಸರರಾದ ವಿದ್ಯಾಧರ ಜೈನ್, ಪಾಲಡ್ಕ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ಯಶೋಧರ ಮರಕಡ , ಹಿಂದೂ ಸಂಗಮ ಬೆಳ್ತಂಗಡಿ ತಾಲೂಕು ಆಯೋಜನ ಸಮಿತಿ ಅಧ್ಯಕ್ಷರಾದ ಅಜಿತ್ ಜಿ. ಶೆಟ್ಟಿ, ತಾಲೂಕು ಆಯೋಜನ ಸಮಿತಿ ಉಪಾಧ್ಯಕ್ಷರಾದ ಜಯಂತ್ ಶೆಟ್ಟಿ, ತಾಲೂಕು ಆಯೋಜನಾ ಸಮಿತಿ ಕಾರ್ಯದರ್ಶಿಗಳಾದ ವಸಂತ ಮರಕಡ, ತಾಲೂಕು ಆಯೋಜನಾ ಸಮಿತಿ ಸಂಯೋಜಕರಾದ ಅನಿಲ್ ಕುಮಾರ್ ಯು, ತಾಲೂಕು ಆಯೋಜನಾ ಸಮಿತಿ ಜೊತೆ ಕಾರ್ಯದರ್ಶಿಗಳಾದ ವೀರೇಂದ್ರ ಕುಮಾರ್ , ಮಡಂತ್ಯಾರು ಮಂಡಲ ಸಂಯೋಜಕರಾದ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇಶದಲ್ಲಿ ನಡೆದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದವರಿಗೆ ಮತ್ತು ಶ್ರೀ ರಾಮಮಂದಿರದ ಕರಸೇವೆಯಲ್ಲಿ ಪಾಲ್ಗೊಂಡ ಕರಸೇವಕರಿಗೆ ಮಂಡಲದ ವತಿಯಿಂದ ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತು ಮತ್ತು ಬಂದಂತ ಎಲ್ಲಾ ಹಿಂದೂ ಬಾಂಧವರನ್ನು ಮತ್ತು ಅತಿಥಿ ಗಣ್ಯರನ್ನು ವೀರೇಂದ್ರ ಕುಮಾರ್ ಅವರು ಸ್ವಾಗತಿಸಿದರು, ಹಾಗೂ ವಂದನಾರ್ಪಣೆಯನ್ನು ಯಶವಂತ ಶೆಟ್ಟಿ ಮುಡಯೂರು ಇವರು ಮಾಡಿದರು. ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು.













