Home News ಬಸ್‌ನ ಗುಟ್ಕಾ ಜಾಹೀರಾತು ಹರಿದಿದ್ದಕ್ಕೆ ಸಚಿವರ ಬೇಸರದ ಮಾತು

ಬಸ್‌ನ ಗುಟ್ಕಾ ಜಾಹೀರಾತು ಹರಿದಿದ್ದಕ್ಕೆ ಸಚಿವರ ಬೇಸರದ ಮಾತು

Ramalinga Reddy

Hindu neighbor gifts plot of land

Hindu neighbour gifts land to Muslim journalist

ರಾಮನಗರ: ಜಾಹೀರಾತುಗಳಿಂದ ಬಿಎಂಟಿಸಿ ಒಂದಕ್ಕೆ 60ಕೋಟಿ ರೂ. ಆದಾಯ ಬರುತ್ತದೆ. ಹುಬ್ಬಳ್ಳಿಯಲ್ಲಿ ಗುಟ್ಕಾ ಜಾಹೀರಾತನ್ನು ಹರಿದು ಹಾಕಿದ್ದಾರೆ. ದೇಶದಲ್ಲೇ ಗುಟ್ಕಾವನ್ನೇ ನಿಷೇಧ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಸಾರಿಗೆ ಬಸ್‌ಗಳ ಮೇಲೆ ಜಾಹೀರಾತು ಅಳವಡಿಕೆ ಕುರಿತು ಪ್ರತಿಕ್ರಿಯೆ ನೀಡುತ್ತಾ, ನಾವು ಗುಟ್ಕಾ ನಿಷೇಧ ಮಾಡೋಕೆ ಹೋರಾಟ ಮಾಡಬೇಕಾ, ಬಸ್‌ ಮೇಲಿನ ಸ್ಟಿಕ್ಕರ್‌ ಬಗ್ಗೆ ಹೋರಾಟ ಮಡಬೇಕಾ? ಗುಟ್ಕಾ ನಿಷೇಧದ ಕುರಿತು ದೇಶವ್ಯಾಪಿ ತೀರ್ಮಾನ ತೆಗೆದುಕೊಳ್ಳಲಿ. ಈ ಕುರಿತು ನಾವು ಗಮನ ಹರಿಸಿದ್ದು, ಇಡೀ ಬಸ್‌ ಪೂರ್ತಿ ಜಾಹೀರಾತು ಹಾಕುವಂತಿಲ್ಲ. ಶೇ.40 ರಷ್ಟು ಮಾತ್ರ ಜಾಹೀರಾತು ಹಾಕುವಂತೆ ಸೂಚನೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.