

ಮಂಗಳೂರು: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ ಎಂದು ಹೇಳಿ ಅಪರಿಚಿತರು ಒಟಿಪಿ ಪಡೆದು 3,32,247 ರೂ. ವಂಚನೆ ಮಾಡಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ತಂದೆಯ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ ಎಂದು ಹೇಳಿದ್ದಾರೆ. ಲಿಂಕ್ ಕಳುಹಿಸಿದ್ದೇವೆ, ಅದನ್ನು ಕ್ಲಿಕ್ ಮಾಡಿ ಎಪಿಕೆ ಫೈಲ್ ಇನ್ಸ್ಟಾಲ್ ಮಾಡಿ ಎಂದಿದ್ದಾರೆ. ಬೋನಸ್ ಠೇವಣಿ ಮಾಡಲು ಕ್ರೆಡಿಟ್ ಕಾರ್ಡ್ ನಂಬರ್ ಕೇಳಿದ್ದಾರೆ. ಅವರು ವಿವರಗಳನ್ನು ನೀಡಿದರು.
ಒಟಿಪಿ ತಿಳಿಸಿದರೆ ಮಾತ್ರ ಬೋನಸ್ ಜಮಾ ಆಗುವುದು ಎಂದು ಅಪರಿಚಿತರು ಹೇಳಿದ್ದು, ಹೀಗೆ ಅವರಿಗೆ ಮೊಬೈಲ್ಗೆ ಬಂದ ಒಟಿಪಿ ಹಲವು ಬಾರಿ ದೂರುದಾರರ ತಂದೆ ನೀಡಿದ್ದಾರೆ.
ಈ ಮೂಲಕ ಜ.16 ರಿಂದ ಜ.20 ರವರೆಗೆ 3,32,247 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಈ ವಂಚನೆ ಕುರಿತು ಆಮೇಲೆ ತಿಳಿದು ಬಂದಿದೆ. ಈ ಕುರಿತು ಗ್ರಾಮಾಂತರ ಠಾಣೆಗೆ ದೂರನ್ನು ನೀಡಲಾಗಿದೆ.













