

ಬೆಳ್ತಂಗಡಿ: ಚಲಿಸುತ್ತಿದ್ದ ಬಸ್‌ನಿಂದ ಮಹಿಳೆಯೋರ್ವರು ರಸ್ತೆಗೆಸೆಯಲ್ಪಟ್ಟ ಘಟನೆ ಮಿಯ್ಯಾರು ಬಳಿ ಜ. 26ರಂದು ಸಂಜೆ ನಡೆದಿತ್ತು.
ಉಡುಪಿಯಿಂದ ಬೆಳ್ತಂಗಡಿಗೆ ಬರುತ್ತಿದ್ದ ವರುಣ್ ಬಸ್ ಮಿಯ್ಯಾರು ಡಿವೈಡರ್ ಬಳಿ ಸಮೀಪಿಸುತ್ತಿದ್ದಂತೆಯೇ ಬಸ್‌ನ ಬಾಗಿಲು ಬಳಿಯಿದ್ದ ಮಿಯ್ಯಾರು ಗ್ರಾಮದ ಜಯಂತಿ (63) ಎಂಬವರು ಹೊರಗೆಸೆಯಲ್ಪಟ್ಟು ಅದೇ ಬಸ್ ಹಿಂಬದಿ ಚಕ್ರಕ್ಕೆ ಸಿಲುಕಿದ್ದು, ಪರಿಣಾಮ ಜಯಂತಿ ಅವರ ಬಲ ಕೈ ಸಂಪೂರ್ಣ ನಜ್ಜುಗುಜ್ಜಾಗಿದೆ.
ತಕ್ಷಣವೇ ಸಾಮಾಜಿಕ ಕಾರ್ಯಕರ್ತ ರಾಮಕಾಂತ್ ಶೆಟ್ಟಿ ಕರಿಮಾರುಕಟ್ಟೆ ಅವರು ತನ್ನ ಕಾರಿನಲ್ಲಿ ಜಯಂತಿ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.













