

ಧರ್ಮಸ್ಥಳ: 2025ರ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಎಂಟೆಕ್ ಬಾಬಾ ಎಂದೇ ಚಿರಪರಿಚಿತರಾಗಿರುವ ಕರ್ನಾಟಕ ದಿಗಂಬರ ಕೃಷ್ಣಗಿರಿ ಮಹಾರಾಜ್ ಸ್ವಾಮೀಜಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜ.26ರಂದು ಭೇಟಿ ನೀಡಿದರು. ದೇವರ ದರ್ಶನ ಪಡೆದು ವಾಪಾಸಾಗಿದ್ದಾರೆ.
ಎಂ.ಟೆಕ್ ಶಿಕ್ಷಣ ಪಡೆದಿದ್ದರೂ ಆಧ್ಯಾತ್ಮದತ್ತ ಆಕರ್ಷಿತರಾಗಿ ನಾಗಾ ಸಾಧು ಆಗಿ ದೀಕ್ಷೆ ಪಡೆದಿದ್ದಾರೆ. 2025ರ ಮಹಾಕುಂಭಮೇಳದಲ್ಲಿ ಸಕ್ರಿಯರಾಗಿದ್ದ ಅವರು, ಸಂಸಾರವನ್ನು ತೊರೆದು ಅತ್ಯಂತ ಕಠಿಣವಾದ ನಾಗಾ ಸಾಧು ಜೀವನವನ್ನು ಆರಿಸಿಕೊಂಡ ಕನ್ನಡದ ಬಾಬಾ ಮತ್ತು ಎಂಟೆಕ್ ಬಾಬಾ ಎಂದು ಗುರುತಿಸಿಕೊಂಡಿದ್ದಾರೆ.













