

ನಟಿ ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಮೇಲೆ ಹಲ್ಲೆ ಮಾಡಲಾಗಿದೆ. ನಟಿ ಕಾವ್ಯಾ ಗೌಡ ಗಳಿಸಿರುವ ಜನಪ್ರಿಯತೆಯನ್ನು ಸಹಿಸದೆ ಈ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸೋಮಶೇಖರ್ ಮತ್ತು ನಂದೀಶ್ ಸಹೋದರರು. ಸೋಮಶೇಖರ್ – ಕಾವ್ಯಾ ದಂಪತಿ ಮತ್ತು ನಂದೀಶ್-ಪ್ರೇಮಾ ದಂಪತಿ ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಕಾವ್ಯ ಮತ್ತು ಪ್ರೇಮಾ ನಡುವೆ ಮನಸ್ತಾಪ ಆಗುತ್ತಿತ್ತು. ಕಾವ್ಯ ಮತ್ತು ಪ್ರೇಮ ಇತ್ತೀಚೆಗೆ ಸಂಬಂಧಿಕರ ಮನೆಗೆ ಬಂದಿದ್ದು, ಆಗ ಗಲಾಟೆಯಾಗಿದೆ.

ಸಂಬಂಧಿ ರವಿಕುಮಾರ್, ಸೋಮಶೇಖರ್ ಮೇಲೆ ಹಲ್ಲೆ ಮಾಡಿದ್ದಾನೆ. ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕಾವ್ಯಾ ಗೌಡಗೆ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕಾವ್ಯಾ ಅವರ ಮೇಲೂ ಹಲ್ಲೆ ಮಾಡಲಾಗಿದೆ.
ಸೋಮಶೇಖರ್ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಾವ್ಯಾ ಅವರ ಅಕ್ಕ ಭವ್ಯಾ ಗೌಡ ಅವರು ಪ್ರೇಮ, ನಂದಿಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.













