Home News ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ ಸಂವಿಧಾನವನ್ನು ಉಳಿಸಬೇಕು; ಅಬ್ದುಲ್ ಮಜೀದ್ ಮೈಸೂರು

ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ ಸಂವಿಧಾನವನ್ನು ಉಳಿಸಬೇಕು; ಅಬ್ದುಲ್ ಮಜೀದ್ ಮೈಸೂರು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: 77 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ “ಸಂವಿಧಾನ ಮೌಲ್ಯಗಳ ರಕ್ಷಣೆ – ಗಣರಾಜ್ಯ ಸಂಭ್ರಮ” ಎಂಬ ಘೋಷ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮವು ಕ್ಷೇತ್ರಾಧ್ಯಕ್ಷ ಅಕ್ಟರ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಧ್ವಜಾರೋಹಣ ನೆರೆವೇರಿಸಿ ಮಾತಾಡಿ, ಗಣರಾಜ್ಯೋತ್ಸವ ದಿನಾಚರಣೆಯ ಭಾಗವಾಗಿ ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು. ಸಂವಿಧಾನ ಪೂರ್ವದಲ್ಲಿ ಇಲ್ಲದ ಹಕ್ಕುಗಳು ಸಂವಿಧಾನ ಜಾರಿಯ ನಂತರ ಹಲವಾರು ಹಕ್ಕುಗಳು ಸಿಕ್ಕಿದೆ. ಸಂವಿಧಾನವನ್ನು ಉಳಿಸಲು ನಾವೆಲ್ಲರೂ ತಯಾರಾಗಬೇಕು. ಇತ್ತೀಚಿಗೆ ಸಂವಿಧಾನ ವಿರೋಧಿ ಕರಾಳ ಕಾನೂನುಗಳು, NIA ಮತ್ತು ED ಸಂಸ್ಥೆಗಳ ದುರುಪಯೋಗ, ಸರ್ಕಾರವನ್ನು ಪ್ರಶ್ನಿಸುವವರ ಮೇಲೆ UAPA ಹೇರಿ ಅಕ್ರಮ ಬಂಧನ, ಆಳುವವರ ಷಡ್ಯಂತ್ರಗಳು ನಮ್ಮ ಸಂವಿಧಾನದ ಆತ್ಮವನ್ನೇ ದುರ್ಬಲಗೊಳಿಸುತ್ತಿವೆ ಎಂದು ಹೇಳಿದರು.

ಎಸ್‌ಡಿಪಿಐ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಲೋನ್ಸ್ ಫ್ರಾಂಕೋ ಹಾಗೂ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಕಾರ್ಯಕ್ರಮನ್ನು ಉದ್ದೇಶಿಸಿ ಅತಿಥಿ ಮಾತುಗಳನ್ನಾಡಿದರು.2026-28ರ ಅವಧಿಗೆ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾದ ಅಲೋನ್ಸ್ ಫ್ರಾಂಕೋ ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರು ಇನಾಸ್ ರೋಡ್ರಿಗಾಸ್, ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರ. ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಜಿಲ್ಲಾ ಸಮಿತಿ ಸದಸ್ಯರು ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ಹಾಗೂ ಬ್ಲಾಕ್ ನಾಯಕರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಅಲ್ಪಾಕ್ ಪುಂಜಾಲಕಟ್ಟೆ ನಿರೂಪಿಸಿ ಧನ್ಯವಾದ ಮಾಡಿದರು