

ದುಬೈ: ಸಾಮಾನ್ಯವಾಗಿ ಕಂಪನಿಗಳು ಹಬ್ಬದ ಸಮಯದಲ್ಲಿ ಬೋನಸ್ ನೀಡುತದೆ. ಆದರೆ ವಿಶೇಷವೇನೆಂದರೆ ದುಬೈನ್ ಉದ್ಯಮಿಯೊಬ್ಬರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮದುವೆಯಾಗಲು ಭಾರೀ ಮೊತ್ತ ಘೋಷಣೆ ಮಾಡಿದ್ದಾರೆ.
ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಖಲಾಫ್ ಅಹ್ಮದ್ ಅಲ್ ಹಬ್ತೂರ್ ಅವರು ಈ ವರ್ಷ ಮದುವೆಯಾಗುವ ತಮ್ಮ ದೇಶದ ಅಂದರೆ ಯುಎಇ ನ ಉದ್ಯೋಗಿಗಳಿಗೆ 50000 ರೂ (ತಲಾ) ದಿರ್ಹಾಮ್ ಅಂದರೆ ರುಪಾಯಿಯಲ್ಲಿ 12.5 ಲಕ್ಷ ರೂ. ಮದುವೆ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮದುವೆ ಮಾತ್ರವಲ್ಲ, ಮದುವೆಯಾದ ಎರಡು ವರ್ಷಗಳ ಒಳಗೆ ಮಗು ಜನಿಸಿದರೆ ಈ ಧನಸಾಹಯವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ್ದಾರೆ. 77 ವರ್ಷದ ಉದ್ಯಮಿ ಖಲಾಫ್ ಅಲ್ ಹಬ್ತೂರ್ ಅವರು ಹೇಳುವ ಪ್ರಕಾರ, ಮದುವೆ ಮತ್ತು ಸಂತಾನೋತ್ಪತ್ತಿ ಎನ್ನುವುದು ಕೇವಲ ವೈಯಕ್ತಿಕ ವಿಚಾರವಲ್ಲ. ಅದು ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಜವಾಬ್ದಾರಿಯಾಗಿದೆ. ಸುದೃಢ ಕುಟುಂಬ ಬಲಿಷ್ಠ ಸಮಾಜವನ್ನು ನಿರ್ಮಿಸುತ್ತದೆ ಮತ್ತು ಬಲಿಷ್ಠ ಸಮಾಜವು ಬಲಿಷ್ಠ ರಾಷ್ಟ್ರಕ್ಕೆ ಅಡಿಪಾಯವಾಗುತ್ತದೆ ಎಂದು ಹೇಳಿದ್ದಾರೆ.













