Home » ನಾಳೆಯೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಘೋಷಣೆ | 2023 ಚುನಾವಣೆಯ ಗಮನದಲ್ಲಿಟ್ಟು ಆಯ್ಕೆ | ಯಡಿಯೂರಪ್ಪ ಅವರೇ ಹೊಸ ಸೀಎಂ ಘೋಷಿಸುತ್ತಾರೆ-ಅರುಣ್ ಸಿಂಗ್

ನಾಳೆಯೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಘೋಷಣೆ | 2023 ಚುನಾವಣೆಯ ಗಮನದಲ್ಲಿಟ್ಟು ಆಯ್ಕೆ | ಯಡಿಯೂರಪ್ಪ ಅವರೇ ಹೊಸ ಸೀಎಂ ಘೋಷಿಸುತ್ತಾರೆ-ಅರುಣ್ ಸಿಂಗ್

by Praveen Chennavara
0 comments

ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿದ್ದಂತೆ ಮುಂದಿನ ಸಿಎಂ ಯಾರು ಎಂಬ ಚರ್ಚೆ ಹಾಗೂ ಕುತೂಹಲ ರಾಜ್ಯರಾಜಕಾರಣ ಸೇರಿದಂತೆ ರಾಜ್ಯ ಬಿಜೆಪಿ ವಲಯದಲ್ಲಿ ಎದ್ದಿದ್ದೆ.

ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಚರ್ಚಿಸಲು ಇಂದು ಮಂಗಳವಾರ ಸಂಜೆ ವೇಳೆಯೇ ದೆಹಲಿಯಿಂದ ಬಿಜೆಪಿ ವೀಕ್ಷಕರು ಆಗಮಿಸುತ್ತಿದ್ದಾರೆ.

ಸಿಎಂ ರೇಸ್​ನಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿದ್ದು, ಅಂತಿಮವಾಗಿ ಯಾರಿಗೆ ಪಟ್ಟ ಕಟ್ಟಬೇಕು ಎಂಬ ಕುರಿತು ಚರ್ಚೆ ಜೋರಾಗಿಯೇ ನಡೆಯುತ್ತಿದೆ.

2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಆಯ್ಕೆ ನಡೆಯಬೇಕಿರುವ ಹಿನ್ನಲೆಯಲ್ಲಿ ಈ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂತರ ಬಿಜೆಪಿ ಕರ್ನಾಟಕ ಘಟಕದ ಬೆಳವಣಿಗೆಗಳನ್ನು ಗಮನಿಸಲೆಂದು ಬಿಜೆಪಿ ಹೈಕಮಾಂಡ್​ ವೀಕ್ಷಕರನ್ನು ನೇಮಿಸಿದೆ.

ಬಿಜೆಪಿಯ ಕರ್ನಾಟಕ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್ ಅವರನ್ನು ನೇಮಿಸಲಾಗಿದೆ ಎನ್ನಲಾಗಿದೆ.ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಅವರು, ‘ಮುಂದಿನ ಮುಖ್ಯಮಂತ್ರಿ ಯಾರು ಅಂತ ಬಿ.ಎಸ್.ಯಡಿಯೂರಪ್ಪ ಅವರೇ ಹೇಳುತ್ತಾರೆ.

ಮುಂದಿನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಸಂಸದೀಯ ಮಂಡಳಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

You may also like

Leave a Comment