Home » ರಿಕ್ಷಾದಲ್ಲಿ ಗಾಂಜಾ ಸಾಗಾಟ | ಅಪಘಾತದಿಂದ ಬಯಲಾಯಿತು ಅಕ್ರಮ | ಸವಣೂರು,ಸಜಿಪಮೂಡದ ಇಬ್ಬರ ಬಂಧನ

ರಿಕ್ಷಾದಲ್ಲಿ ಗಾಂಜಾ ಸಾಗಾಟ | ಅಪಘಾತದಿಂದ ಬಯಲಾಯಿತು ಅಕ್ರಮ | ಸವಣೂರು,ಸಜಿಪಮೂಡದ ಇಬ್ಬರ ಬಂಧನ

by Praveen Chennavara
0 comments

ವಿಟ್ಲ ಪೊಲೀಸ್‌ ಠಾಣಾ ನಿರೀಕ್ಷಕರಾದ ನಾಗಾರಾಜ್‌ ಹೆಚ್‌ ಈ ಮತ್ತು ಠಾಣಾ ಪಿಎಸ್ಐ ಮಂಜುನಾಥ, ಹೆಚ್ ಸಿ ಪ್ರಸನ್ನ, ಪಿಸಿ ಪ್ರತಾಪ್, ಮತ್ತು ಪಿಸಿ ಲೋಕೇಶ್, ಹಾಗೂ ಎಪಿಸಿ 78 ಪ್ರವೀಣ್ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಜು.27ರಂದು ಮಧ್ಯಾಹ್ನ ವಾಹನ ತಪಾಸಣೆ ಮಾಡುತ್ತಿರುವಾಗ ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಒಂದು ಆಟೋ ರಿಕ್ಷಾವನ್ನು ಅದರ ಚಾಲಕ ಚಲಾಯಿಸಿಕೊಂಡು ಬರುವುದನ್ನು ಕಂಡ ಸಿಬ್ಬಂದಿಗಳು ಆಟೋ ರಿಕ್ಷಾವನ್ನು ಅದರ ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ಆಟೋ ರಿಕ್ಷಾ ಚಾಲಕನು ಒಮ್ಮೆಲೇ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ಆಟೋ ರಿಕ್ಷಾವು ಚಾಲಕನ ಹತೋಟಿ ತಪ್ಪಿ 30 ಅಡಿ ದೂರದಲ್ಲಿ ಉಕ್ಕಡ ಕಡೆಗೆ ಮುಖ ಮಾಡಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ರಕ್ಷಣೆಗೆ ಹೋದಾಗ ಅವರು ಬಿದ್ದ ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಅಸೀಫ್ ಯಾನೆ ಅಚಿ (28) ತಂದೆ: ದಿ| ಇಬ್ರಾಹಿಂ ವಾಸ:ಸುಬಾಶ್ ನಗರ ಗುರು ಮಂದಿರ ಸಜಿಪಮೂಡ ಗ್ರಾಮ ಬಂಟ್ವಾಳ ತಾಲೂಕು, 2) ಫರಾಝ್ (23) ತಂದೆ:ಇಬ್ರಾಹಿಂ ವಾಸ: ಚಾಪಳ್ಳ ಮಸೀದಿ ಹತ್ತಿರ ಮನೆ ಮಾಂತೂರು ಸವಣೂರು ಗ್ರಾಮ ಕಡಬ ತಾಲೂಕು ಎಂದು ತಿಳಿಸಿದ್ದಾರೆ.

ಆಟೋ ರಿಕ್ಷಾದಲ್ಲಿ ಗಾಂಜಾ ಇರುವುದನ್ನು ತಿಳಿಸಿ ಆಟೋ ರಿಕ್ಷಾದ ಬಳಿ ಬಂದು ಚಾಲಕನ ಸೀಟಿನ ಅಡಿಯಲ್ಲಿದ್ದ ಒಂದು ಕಟ್ಟನ್ನು ತೆಗೆದು ಇದು ಗಾಂಜಾದ ಕಟ್ಟು ಎಂದು ತೋರಿಸಿ ಇದನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದರಿಂದ ಕೂಡಲೇ ವಾಹನವನ್ನು ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳುವ ಬಗ್ಗೆ ತೀರ್ಮಾನಿಸಿ ದೂರವಾಣಿ ಮೂಲಕ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಬಳಿಕ ಪತ್ರಾಂಕಿತ ಅಧಿಕಾರಿ, ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಅವರ ಸಮಕ್ಷಮ ಅಟೋರಿಕ್ಷಾ ಚಾಲಕನ ಸೀಟಿನ ಒಳ ಭಾಗದಿಂದ ಒಂದು ಖಾಕಿ ಬಣ್ಣದ ಗಂ-ಟೇಪಿನಿಂದ ಸುತ್ತಿದ್ದ ಕಟ್ಟನ್ನು ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್ ತೂಕ ಮಾಪನದಿಂದ ಪತ್ರಾಂಕಿತ ಅಧಿಕಾರಿ ಪಂಚರ ಸಮಕ್ಷಮದಲ್ಲಿ ತೂಕ ಮಾಡಿ ಪರಿಶೀಲಿಸಿದಾಗ ಗಾಂಜಾ ಒಟ್ಟು 2060 ಗ್ರಾಂ ಇದ್ದು.ಗಾಂಜಾ ಮತ್ತು ಸದ್ರಿ ಗಾಂಜಾವನ್ನು ಸಾಗಾಟ ಮಾಡುವರೇ ಉಪಯೋಗಿಸಿದ ಆಟೋ ರಿಕ್ಷಾ ಕೆಎ-70-0557 ನೇದನ್ನು ಹಾಗೂ ಆಟೋ ರಿಕ್ಷಾದ ಅರ್ ಸಿ ನಕಲನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ ಸುಮಾರು 60,000/-ರೂ ಆಗಿರುತ್ತದೆ. ಆಟೋ ರಿಕ್ಷಾದ ಅಂದಾಜು ಮೌಲ್ಯ ರೂ 1,50,000/- ಆಗಬಹುದು. ಆರೋಪಿತರು ಅಕ್ರಮವಾಗಿ ನಿಷೇಧಿತ ಗಾಂಜಾ ಎಂಬ ಮಾದಕ ವಸ್ತುವನ್ನು ಯಾವುದೇ ಪರವಾನಿಗೆ ಹಾಗೂ ದಾಖಲಾತಿಗಳಿಲ್ಲದೇ ತಮ್ಮ ವಶದಲ್ಲಿ ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಿಸಲು ಪ್ರಯತ್ನಿಸಿರುವುದು ದೃಢ ಪಟ್ಟಿರುವುದರಿಂದ ಆರೋಪಿ ಅಸೀಫ್ ಯಾನೆ ಅಚಿ ಮತ್ತು ಫರಾಝ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

You may also like

Leave a Comment