Home » ಪೇಟಿಎಂ ನಿಂದ ತಿಂಗಳಿಗೆ 35,000 ರೂ. ಸಂಬಳದ 20,000 ಹೊಸ ನೇಮಕಾತಿ ಸದ್ಯದಲ್ಲೇ | ಆಕಾಂಕ್ಷಿಗಳು ಗಮನಿಸುತ್ತಿರಿ

ಪೇಟಿಎಂ ನಿಂದ ತಿಂಗಳಿಗೆ 35,000 ರೂ. ಸಂಬಳದ 20,000 ಹೊಸ ನೇಮಕಾತಿ ಸದ್ಯದಲ್ಲೇ | ಆಕಾಂಕ್ಷಿಗಳು ಗಮನಿಸುತ್ತಿರಿ

0 comments

ನವದೆಹಲಿ: ಇನ್ಸ್ಟಂಟ್ ಮೊಬೈಲ್ ಮನಿ ಟ್ರಾನ್ಸ್ ಫರ್ ದೈತ್ಯ ಪೇಟಿಎಂ ದೇಶದಾದ್ಯಂತ 20,000ಕ್ಕೂ ಹೆಚ್ಚು ಫೀಲ್ಡ್ ಮಾರಾಟ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.

ಪೇಟಿಎಂ ತನ್ನ ಷೇರು ಮಾರುಕಟ್ಟೆ ಪ್ರವೇಶಿಸಲು ಹೊರಟ ಇನೀಷಿಯಲ್ ಪಬ್ಲಿಕ್ ಆಫರಿಂಗ್‌ಗೂ (ಐಪಿಒ) ಮುಂಚೆಯೇ ಈ ನೇಮಕಕ್ಕೆ ಕಂಪನಿ ಮುಂದಾಗಿದೆ.

ಪ್ರಮುಖ ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್) ಕಂಪನಿಯಾದ ಪೇಟಿಎಂ, ತನ್ನ ಪ್ರತಿಸ್ಪರ್ಧಿಗಳಾದ ಫೋನ್‌ಪೇ ಮತ್ತು ಗೂಗಲ್ ಪೇ ಒಡ್ಡುತ್ತಿರುವ ತೀವ್ರ ಸ್ಪರ್ಧೆಯ ಹಿನ್ನೆಲೆಯಲ್ಲಿ ತನ್ನ ಉತ್ಪನ್ನಗಳ ಮಾರಾಟ ವಿಭಾಗವನ್ನು ಬಲಶಾಲಿ ಮಾಡಲು ಹೆಚ್ಚಿನ ಒತ್ತು ನೀಡಲು ಹೊರಟಿದೆ.
ಅದರ ಭಾಗವಾಗಿ ಸುಮಾರು 20000 ಹೊಸ ನೇಮಕದ ನಿರ್ಧಾರ ಕೈಗೊಂಡಿದೆ. ಹೊಸ ನೇಮಕಗೊಳ್ಳುವ ಮಾರಾಟ ಪ್ರತಿನಿಧಿಗಳಿಗೆ ಮಾಸಿಕ ಸುಮಾರು 35,000 ರೂಪಾಯಿ ವೇತನ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

You may also like

Leave a Comment