Home » ನೆಟ್ಟಣ: ವಿದ್ಯುತ್ ವಂಚಿತ ಮನೆಗೆ ವಿದ್ಯುತ್ ಸಂಪರ್ಕ

ನೆಟ್ಟಣ: ವಿದ್ಯುತ್ ವಂಚಿತ ಮನೆಗೆ ವಿದ್ಯುತ್ ಸಂಪರ್ಕ

by Praveen Chennavara
0 comments

ಕಡಬ: ಕಡಬ ಬ್ಲಾಕ್ ಯೂತ್ ಕಾಂಗ್ರೆಸ್‌ ಅಧ್ಯಕ್ಷ ಅಭಿಲಾಷ್ ಪಿ.ಕೆ. ಅವರಿಂದ ಬಿಳಿನೆಲೆ ಗ್ರಾಮದ ನೆಟ್ಟಣ ಕೊರಗರ ಕಾಲನಿಯವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.
ಬಿಳಿನೆಲೆ ಗ್ರಾಮದ ನೆಟ್ಟಣ ಆದಿನೆಲೆ ಕೊರಗರ ಕಾಲನಿಯ ಬಾಬು ಕೊರಗ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದರು. ಇವರ ಸಮಸ್ಯೆಯನ್ನು ಅರಿತ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ಮನವಿಯ ಮೇರೆಗೆ ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ಅವರು ಸುಮಾರು 15000 ರೂ. ಖರ್ಚು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಬಾಬು ಕೊರಗ ಅವರಿಗೆ ವಿದ್ಯುತ್ ಸಂಪರ್ಕಕ್ಕೆ ಗುರುವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಡಬ ಯೂತ್ ಕಾಂಗ್ರೆಸ್ಸ್ ಅಧ್ಯಕ್ಷ ಅಭಿಲಾಷ್ ಪಿ ಕೆ, ಬಿಳಿನೆಲೆ ಗ್ರಾಮ ಪಂಚಾಯಿತ್ ಅಧ್ಯಕ್ಷ ಶಿವಶಂಕರ್ ಬಿಳಿನೆಲೆ, ಉಪಾಧ್ಯಕ್ಷೆ ಶಾರದ ದಿನೇಶ್ ಗೌಡ, ಮೆಸ್ಕಾಂ ನ ಅಧಿಕಾರಿಗಳು ಹಾಗು ಸಿಬ್ಬಂದಿ, ಕೆ ಇ ಬಿ ಕಾಂಟ್ರೆಂಕ್ಟರ್ ವಿನಯ್ ಕುಮಾರ್ ನೆಟ್ಟಣ, ಸಂತೋಷ್ ನಾಯರ್ ನೆಟ್ಟಣ, ರದೀಶ್ ನೆಟ್ಟಣ ಹಾಗೂ ಆದಿನೆಲೆ ಕೊರಗರ ಕಾಲನಿಯವರು ಉಪಸ್ಥಿತರಿದ್ದರು.

You may also like

Leave a Comment