Home » ಪಾಣೆಮಂಗಳೂರು ಸೇತುವೆಯ ಮೇಲೆ ಬೈಕ್ ಬಿಟ್ಟು ನಾಪತ್ತೆಯಾದ ಯುವಕ ಮಂಜೇಶ್ವರ ಕಣ್ವತೀರ್ಥದಲ್ಲಿ ಶವವಾಗಿ ಪತ್ತೆ

ಪಾಣೆಮಂಗಳೂರು ಸೇತುವೆಯ ಮೇಲೆ ಬೈಕ್ ಬಿಟ್ಟು ನಾಪತ್ತೆಯಾದ ಯುವಕ ಮಂಜೇಶ್ವರ ಕಣ್ವತೀರ್ಥದಲ್ಲಿ ಶವವಾಗಿ ಪತ್ತೆ

by Praveen Chennavara
0 comments

ಕಾಸರಗೋಡು: ಬೆಂಗಳೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಸಮೀಪದ ಪಾಣೆಮಂಗಳೂರು ಸೇತುವೆಯಲ್ಲಿ ಜುಲೈ 28 ರಂದು ಮುಂಜಾನೆ ಬೈಕನ್ನು ಚಲನಾ ಸ್ಥಿತಿಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದು, ಇದೀಗ ಆತನ ಮೃತದೇಹ ಮಂಜೇಶ್ವರದ ಕಣ್ವತೀರ್ಥ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29)ಎಂದು ಗುರುತಿಸಲಾಗಿದೆ.

ಕಾಸರಗೋಡು ಕರಾವಳಿ ಪೋಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್‌ ಆಸ್ಪತ್ರೆಗೆ ಸಾಗಿಸಿದ್ದರು. ಕಾಸರಗೋಡು ಪೋಲೀಸರು ಬೆಂಗಳೂರಿನಲ್ಲಿರುವ ಆತನ ಮನೆಯವರಿಗೆ ವಿಷಯ ತಿಳಿಸಿದ್ದು. ಇಂದು ಆತನ ಮನೆಯವರು ಕಾಸರಗೋಡಿಗೆ ತಲುಪಿದ್ದು ಆತನ ಗುರುತು ಪತ್ತೆಹಚ್ಚಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಜುಲೈ 28 ರಂದು ಮನೆಯಿಂದ ಬೈಕ್‌ ನಲ್ಲಿ ತೆರಳಿದ್ದು ನಂತರ ನಾಪತ್ತೆಯಾಗಿದ್ದನು. ಈ ಬಗ್ಗೆ ಅವರ ತಾಯಿ ಬೆಂಗಳೂರು ಪೋಲೀಸರಿಗೆ ದೂರು ನೀಡಿದ್ದರು. ಈತನ್ಮದ್ಯೆ ಪಾಣೆಮಂಗಳೂರಿನ ಸೇತುವೆಯಲ್ಲಿ ಈತನ ಬೈಕ್‌ ಸ್ಟಾರ್ಟ್‌ ಮಾಡಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹ ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

You may also like

Leave a Comment