Home » ಬೆಳ್ತಂಗಡಿ : ಜಿಲ್ಲಾ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಘೋಷಣಾ ಸಭೆ

ಬೆಳ್ತಂಗಡಿ : ಜಿಲ್ಲಾ ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಘೋಷಣಾ ಸಭೆ

by Praveen Chennavara
0 comments

ಬೆಳ್ತಂಗಡಿ : ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಸಂಯೋಜಿತ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ಜಿಲ್ಲಾ ಸಮಿತಿಯ ಅಧಿಕೃತ ಘೋಷಣಾ ಸಭೆ ಮತ್ತು ಭಾರತೀಯ ಮಜ್ದೂರು ಸಂಘ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಯುತ ಜಯರಾಜ್ ಸಾಲ್ಯಾನ್ ಇವರಿಗೆ ಗೌರವಾರ್ಪಣಾ ಸಮಾರಂಭ ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ನಡೆಯಿತು.

ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿಯ ಕಾರ್ಯದರ್ಶಿ ಶ್ರೀಯುತ ಜಯರಾಜ್ ಸಾಲ್ಯಾನ್ ಕಾನರ್ಪ ಇವರಿಗೆ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ಪ್ರದಾನ ಕಾರ್ಯದರ್ಶಿ ನಾಗರಾಜ್ ಬದಣಾಜೆ ಹೂ ಗುಚ್ಚ ನೀಡಿ, ಅಧ್ಯಕ್ಷರಾದ ದಯಾನಂದ ಇವರುಗಳು ರಬ್ಬರ್ ಟ್ಯಾಪರ್ಸ ಕಾರ್ಮಿಕರ ಪರವಾಗಿ ಶಾಲು ಹೊದಿಸಿ ಗೌರವಸಿದರು.

ಈ ಸಂಧರ್ಭದಲ್ಲಿ ಗೌರವಾನ್ವಿತ ಭಾರತೀಯ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಯಾದ ಜಯರಾಜ್ ಸಾಲ್ಯಾನ್ ಕಾನರ್ಪ ಇವರು ಸಂಘ ಎಂಬುದು ಒಂದು ಭಕ್ತಿ ಪೂರ್ವಕ ವಾದದ್ದು ಮತ್ತು ಸಮಾಜ ಸೇವೆಯಲ್ಲಿ ಶಿಸ್ತಿನಿಂದ ತೊಡಗಿಸಿಕೊಂಡಾಗ ಅದು ದೇವರ ಕೆಲಸವಾಗುತ್ತದೆ.ಭಾರತೀಯ ಮಜ್ದೂರು ಸಂಘದ ಸ್ಥಾಪಕರಾದ ಥೆಂಘಡಿಜಿ ಅವರ ಮಾರ್ಗ ದರ್ಶನ ವನ್ನು ಪಾಲಿಸುವ ಮತ್ತು ನಾವೆಲ್ಲರೂ ಜಾತಿ,ಮೇಲು ಕೀಳು ಎಂದಿಲ್ಲದೆ ಸಹೋದರತ್ವದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು.

ನಂತರ ನಡೆದ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿ ಯಾಗಿ ನಾಗರಾಜ್ ಬದಣಾಜೆ, ಉಪ ಪ್ರಧಾನ ಕಾರ್ಯದರ್ಶಿ ಯಾಗಿ ಸುರೇಶ್ ಕುತ್ತಿನ,ಸಂಘಟನ ಕಾರ್ಯದರ್ಶಿ ಯಾಗಿ ಭುವನೇಶ್ವರ ಕಾರಿಂಜ,ಕೋಶಾಧಿಕಾರಿ ರಾಜ ಮಾಚಾರು ಹಾಗು ಉಪಾಧ್ಯಕ್ಷರುಗಳಾಗಿ ಸಂದಿಲ್ ಕುಮಾರ್ ಒಟಕಜೆ,ಮನೋಜ್ ಮೂರ್ಜೆ,ಅಚ್ಚುತ ಪ್ರಭು ಕುಂಬ್ರ,ಯೋಗಿಶ್ ಪೂಂಜಾಲಕಟ್ಟೆ,ಹರಿಶಂಖರ್ ಕುಂದಾಪುರ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ನಾಗೇಂದ್ರ, ರಘುಪತಿ, ಅಶೋಕ್ ಮೂರ್ಜೆ ಹಾಗೂ ನಿರ್ದೇಶಕರಾಗಿ ಅರುಣ್ ವರ್ಧನ್,ಅಜಿತ್ ಕಿನ್ಯಾಜೆ,ಶಶಿಕುಮಾರ್ ತೊಡಿಕಾನ ಆಯ್ಕೆ ಮಾಡಲಾಯಿತು. ಭುವನೇಶ್ವರ ಕಾರಿಂಜ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ,ವಂದಿಸಿದರು.

You may also like

Leave a Comment