Home » ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಮೃತದೇಹ ಪತ್ತೆ

ಕಡಬ : ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಮೃತದೇಹ ಪತ್ತೆ

by Praveen Chennavara
0 comments

ಕಡಬದ ಹಿಂದೂ ರುದ್ರಭೂಮಿಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹವೊಂದು ಶನಿವಾರ ರಾತ್ರಿ ಕಂಡುಬಂದಿದೆ.

ಕಡಬ ಸಮೀಪದ ಗೋಳಿಯಡ್ಕ ನಿವಾಸಿಯೋರ್ವರು ಶನಿವಾರದಂದು ಮೃತಪಟ್ಟಿದ್ದು, ಕಡಬದ ಹಿಂದೂ ರುದ್ರಭೂಮಿಯಲ್ಲಿ ದಹನ ಕಾರ್ಯ ಮಾಡಲಾಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರು ಮೃತದೇಹಕ್ಕೆ ಬೆಂಕಿ ಹಚ್ಚಿ ತೆರಳಿದ್ದರು ಎನ್ನಲಾಗಿದೆ. ಸಂಜೆ ವೇಳೆಗೆ ಪರಿಸರದ ವಾಸಿಗಳಿಗೆ ವಾಸನೆ ಬರಲಾರಂಭಿಸಿದ್ದು, ಸ್ಮಶಾನಕ್ಕೆ ತೆರಳಿದಾಗ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಸೇರಿ ಬೆಂಕಿಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

You may also like

Leave a Comment