Home » Breaking news ತನ್ನ ವಿದ್ಯಾರ್ಥಿನಿಯ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ಶಿಕ್ಷಕ | ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಗುರುರಾಜ್ ಬಂಧನ

Breaking news ತನ್ನ ವಿದ್ಯಾರ್ಥಿನಿಯ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ಶಿಕ್ಷಕ | ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಗುರುರಾಜ್ ಬಂಧನ

by Praveen Chennavara
0 comments

ತಾನು ಪಾಠ ಕಲಿಸುತ್ತಿರುವ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷಕನೋರ್ವನನ್ನು ಬಂಧಿಸಿದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ. ಬಂಧಿತ ಶಿಕ್ಷಕನನ್ನು ರಾಯಚೂರು ಮೂಲದ, ಕಳೆದ ಹಲವು ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಪ್ರೌಢ ಶಾಲೆಯಲ್ಲಿ ಪ್ರಾಧ್ಯಾಪನಾಗಿದ್ದ ಗುರುರಾಜ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿಯ ವಿರುದ್ಧ ಈ ಮೊದಲೇ ಕೆಲ ಆರೋಪಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಈತನ ನಡವಳಿಕೆ ಸರಿ ಇರಲಿಲ್ಲ ಎಂದು ಶಾಲೆಯ ಕೆಲ ವಿದ್ಯಾರ್ಥಿನಿಯರು ಈತನೊಂದಿಗೆ ಸಲುಗೆಯಿಂದ ಇರುತ್ತಿರಲಿಲ್ಲ. ಸದ್ಯ ಈತ ಅತ್ಯಾಚಾರ ನಡೆಸಿದ ಬಗ್ಗೆ ನೊಂದ ಬಾಲಕಿಯ ತಾಯಿಯು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

You may also like

Leave a Comment