Home » ಸುಳ್ಯ : ಕಾಲು ಜಾರಿ ಕೆರೆಗೆ ಬಿದ್ದ ಮಗು | ರಕ್ಷಿಸಲು ಇಳಿದ ತಾಯಿ ,ಇಬ್ಬರೂ ಮುಳುಗಿ ಸಾವು

ಸುಳ್ಯ : ಕಾಲು ಜಾರಿ ಕೆರೆಗೆ ಬಿದ್ದ ಮಗು | ರಕ್ಷಿಸಲು ಇಳಿದ ತಾಯಿ ,ಇಬ್ಬರೂ ಮುಳುಗಿ ಸಾವು

by ಹೊಸಕನ್ನಡ
0 comments

ತಾಯಿ ಹಾಗೂ ಮಗು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಎಂಬಲ್ಲಿ ಇಂದು ನಡೆದಿದೆ.

ಮಾಪಲಕಜೆಯ ಜನಾರ್ದನ ನಾಯಕ್ ಎಂಬವರ ಪುತ್ರಿ ಸಂಗೀತ ಅವರ ಮಗು ಮನೆಯ ಬಳಿಯ ಕೆರೆಗೆ ಕಾಲು ಜಾರಿ ಬಿದ್ದಿದೆ. ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಸಂಗೀತ, ಈಜು ಬಾರದೆ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.

ತಾಯಿಯ ಮೃತದೇಹ ಕೆರೆಯಿಂದ ಹೊರ ತೆಗೆಯಲಾಗಿದ್ದು, ಮಗುವಿಗಾಗಿ ಅಗ್ನಿಶಾಮಕ ದಳದವರು ಹುಡುಕಾಟ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment