ಈ ಬಾರಿಯ ಎಸ್ಎಸ್ಎಲ್ ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನನ್ಯ ಹಾಗೂ ವೆನೆಸಾ ಶರಿನಾ ಡಿಸೋಜ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಲೇ ರಾಜ್ಯದಲ್ಲೇ ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆ ಮತ್ತೆ ಸುದ್ದಿಯಾಗಿದೆ. ಕಳೆದ ಬಾರಿ ಅನುಷ್ ಎಲ್. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದರು. ಈ ಬಾರಿಯೂ ಕೂಡ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನನ್ಯ ಹಾಗೂ ವೆನೆಸಾ ಶರಿನಾ ಡಿಸೋಜ ಅವರು 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗಾಗಿ ಸತತ ಈ ಬಾರಿಯೂ ಶಾಲೆಯ ಹೆಸರು ಪ್ರಚಲಿತಕ್ಕೆ ಬಂದಿದೆ.

ಅನನ್ಯ ಅವರು ಗುತ್ತಿಗಾರು ಗ್ರಾಮದ ಮಣಿಯಾನ
ಮನೆ ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿಯಾಗಿದ್ದು,ವೆನೆಸಾ ಶರಿನಾ ಡಿಸೋಜಾ ಸುಬ್ರಹ್ಮಣ್ಯ ದ ವೆಲೇರಿಯನ್ ಡಿಸೋಜಾ ಮತ್ತು ತೆರೆಸಾ ಡಿಸೋಜಾ ದಂಪತಿಗಳ ಪುತ್ರಿ ವಿದ್ಯಾರ್ಥಿನಿಯರ ಈ ಸಾಧನೆ ಭಾರೀ ಸುದ್ದಿಯಾಗುತ್ತಿದೆ.


ಅಕ್ಕ ಹಾಗೂ ಪೋಷಕರೊಂದಿಗೆ ಅನನ್ಯ
