Home » ನಾಗರ ಪಂಚಮಿ ಆಚರಣೆ ಮೇಲೆ ಕೊರೋನ ಕರಿನೆರಳು | ಈ ಬಾರಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆಗೆ ಜಿಲ್ಲಾಡಳಿತದಿಂದ ನಿರ್ಬಂಧ

ನಾಗರ ಪಂಚಮಿ ಆಚರಣೆ ಮೇಲೆ ಕೊರೋನ ಕರಿನೆರಳು | ಈ ಬಾರಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆಗೆ ಜಿಲ್ಲಾಡಳಿತದಿಂದ ನಿರ್ಬಂಧ

by ಹೊಸಕನ್ನಡ
0 comments

ಮಂಗಳೂರು : ಗಡಿಭಾಗದಲ್ಲಿ ಹೆಚ್ಚಾದ ಕೊರೊನ ಪ್ರಕರಣದ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಮಹಾಮಾರಿಯ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂಗೆ ಆದೇಶ ನೀಡಿದೆ. ಮತ್ತೊಂದೆಡೆ ದೇಗುಲಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಿದೆ.

ಈ ಬಾರಿಯ ನಾಗರಪಂಚಮಿ ಆಚರಣೆಗೂ ಕೊರೊನಾ ಕರಿ ನೆರಳು ಬಿದ್ದಿದ್ದು,ಈ ಬಾರಿಯ ಸಾಮೂಹಿಕ ನಾಗರ ಪಂಚಮಿ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಸಾರ್ವಜನಿಕರು ನಾಗಬನ ಅಥವಾ ಹುತ್ತಕ್ಕೆ ಸಾಮೂಹಿಕವಾಗಿ ಗುಂಪು ಗುಂಪಾಗಿ ಸೇರಿ ಪೂಜೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು,ದೇವಾಲಯಗಳಲ್ಲಿ ದರ್ಶನ ಹಾಗೂ ವೈಯಕ್ತಿಕ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಜಿಲ್ಲಾಡಳಿತದ ಈ ನಿಯಮಗಳನ್ನು ಜಿಲ್ಲೆಯ ಜನತೆ ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದೆ.

You may also like

Leave a Comment