Home » ಉಳ್ಳಾಲ : ಉಗ್ರರೊಂದಿಗೆ ಸಂಪರ್ಕ ಹಿನ್ನೆಲೆ ,ಮಾಜಿ ಶಾಸಕರ ಪುತ್ರನ ಮನೆಗೆ ವಿ.ಹಿಂ.ಪ, ಬಜರಂಗದಳ ಮುತ್ತಿಗೆ

ಉಳ್ಳಾಲ : ಉಗ್ರರೊಂದಿಗೆ ಸಂಪರ್ಕ ಹಿನ್ನೆಲೆ ,ಮಾಜಿ ಶಾಸಕರ ಪುತ್ರನ ಮನೆಗೆ ವಿ.ಹಿಂ.ಪ, ಬಜರಂಗದಳ ಮುತ್ತಿಗೆ

by Praveen Chennavara
0 comments

ಮಂಗಳೂರು : ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಇದಿನಬ್ಬ ಪುತ್ರ ಬಿ.ಎಂ ಬಾಷಾ ಮನೆಗೆ ಎನ್‌ಐಎ ದಾಳಿ ನಡೆಸಿ ಆತನ ಪುತ್ರನನ್ನು ಬಂಧಿಸಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಉಳ್ಳಾಲದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಪ್ರತಿಭಟನೆ ನಡೆಸಿ ಲವ್ ಜಿಹಾದ್ ನಡೆಸಿ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿರುವ ಶಾಸಕರ ಕುಟುಂಬವನ್ನು ಕೂಡಲೇ ಬಹಿಷ್ಕರಿಸಬೇಕು ಎಂದು ಪ್ರತಿಭಟನೆ ನಡೆಸಿದೆ.

ಈ ವೇಳೆ ಬ್ಯಾನ್ ಟೆರರಿಸಂ ಎಂಬ ಬ್ಯಾನರ್ ಹಿಡಿದು ಜನಜಾಗೃತಿ ಆಂದೋಲನ ನಡೆಸಲಾಯಿತು. ತಲಪಾಡಿ, ಕೋಟೆಕಾರು, ಬೀರಿ, ತೊಕ್ಕೊಟ್ಟು, ಮುಡಿಪು, ನೇತ್ರಾವತಿ ಸೇತುವೆ, ಕಲ್ಲಾಪು, ಕೊಣಾಜೆ ಸಹಿತ ವಿವಿದೆಡೆ ಹಿಂದೂ ಕಾರ್ಯಕರ್ತರು ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದು, ಬಳಿಕ ವಿಹಿಂಪ ಮುಖಂಡ ಶರಣ್ ಪಂಪೈಲ್ ನೇತೃತ್ವದಲ್ಲಿ ಎನ್‌ಐಎ ದಾಳಿ ನಡೆದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ ಬಾಷಾ ಮನೆಗೆ ನುಗ್ಗಲು ಯತ್ನಿಸಿತ್ತು. ಈ ವೇಳೆ ಪೊಲೀಸರು ಪ್ರತಿಭಟನಾ ಕಾರರನ್ನು ತಡೆದರು.

You may also like

Leave a Comment