Home » 11ಇ ನಕ್ಷೆಗೆ ಸಲ್ಲಿಸಿದ ಅರ್ಜಿ 16 ತಿಂಗಳಿನಿಂದ ಕಡಬ ಗ್ರಾಮ ಕರಣಿಕರ ಕಛೇರಿಯಲ್ಲಿಯೇ ಬಾಕಿ! |ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ ಅರ್ಜಿದಾರರು-ಅರ್ಜಿಯ ವರದಿ ನೀಡುವಂತೆ ಕಡಬ ತಹಸೀಲ್ದಾರ್‍ಗೆ ಜಿಲ್ಲಾಧಿಕಾರಿ ಸೂಚನೆ

11ಇ ನಕ್ಷೆಗೆ ಸಲ್ಲಿಸಿದ ಅರ್ಜಿ 16 ತಿಂಗಳಿನಿಂದ ಕಡಬ ಗ್ರಾಮ ಕರಣಿಕರ ಕಛೇರಿಯಲ್ಲಿಯೇ ಬಾಕಿ! |ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ ಅರ್ಜಿದಾರರು-ಅರ್ಜಿಯ ವರದಿ ನೀಡುವಂತೆ ಕಡಬ ತಹಸೀಲ್ದಾರ್‍ಗೆ ಜಿಲ್ಲಾಧಿಕಾರಿ ಸೂಚನೆ

by Praveen Chennavara
0 comments

ಕಡಬ: 11 ಇ ನಕ್ಷೆ ತಯಾರಿಸಲು ಅರ್ಜಿ ಸಲ್ಲಿಸಿ ಸುಮಾರು 16 ತಿಂಗಳು ಕಳೆದರೂ ಅರ್ಜಿಯನ್ನು ಕಛೇರಿಯಲ್ಲಿಟ್ಟುಕೊಂಡು ಅರ್ಜಿಗೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಅರ್ಜಿದಾರರು ಪ್ರದಾನಿ ಕಾರ್ಯಲಯಕ್ಕೆ ದೂರು ಸಲ್ಲಿಸಿದ್ದು ಪರಿಣಾಮ ತ್ವರಿತ ಅರ್ಜಿ ವಿಲೇವಾರಿ ನಡೆಸಿ ವರದಿ ನೀಡುವಂತೆ ಪ್ರದಾನಿ ಕಾರ್ಯಲಯದಿಂದ ಸೂಚನೆ ಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರು ಕಡಬ ತಹಸೀಲ್ದಾರ್ ಅವರಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ವ್ಯಕ್ತಿಯೋರ್ವರು 156/1ಡಿ8 ಸರ್ವೆ ನಂಬ್ರದ 2.31 ಎಕ್ರೆ ಜಾಗದ 11 ಇ ನಕ್ಷೆ ತಯಾರಿಸಲು 17/03/2020 ರಂದು ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದರು . ಬಳಿಕ ದಿನಗಳಲ್ಲಿ ಕಡಬ ಗ್ರಾಮಕರಣಿಕರ ಕಚೇರಿಗೆ ಹಲವಾರು ಬಂದು ವಿಚಾರಿಸಿದರೂ ಯಾವೂದೇ ಸ್ಪಂದನೆ ಸಿಗದೆ ಸತಾಯಿಸಿದ್ದರು. ಇದರಿಂದ ನೊಂದ ಅರ್ಜಿದಾರರು ಪ್ರದಾನಿ ಕಾರ್ಯಲಯಕ್ಕೆ ದೂರು ನೀಡಿ ಮನವಿ ಸಲ್ಲಿದ್ದರು. ಇದಕ್ಕೆ ಸ್ಪಂದಿಸಿದ ಪ್ರದಾನಿ ಕಾರ್ಯಲಯ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳ ಮೂಲಕ ತಕ್ಷಣ ವಿಲೇವಾರಿ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡ ಎಲ್ಲ ಪತ್ರಗಳು ಪ್ರಧಾನಿ ಕಾರ್ಯಲಯದಿಂದ ಅರ್ಜಿದಾರರಿಗೆ ತಲುಪಿಸಲಾಗಿದೆ.

ಪ್ರಕರಣದ ಹಿನ್ನಲೆ:
ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಧರ್ಮಪಾಲ ಗೌಡ ಎಂಬವವರು ಅರ್ಜಿ ಸಲ್ಲಿಸಿದ ಬಳಿಕ ಕಡಬ ಗ್ರಾಮ ಕರಣಿಕರ ಕಚೇರಿಗೆ ಹಲವಾರು ಬಾರಿ ಬಂದಿದ್ದರು ಆದರೆ ಈ ಬಗ್ಗೆ ಗ್ರಾಮಕರಿಣಿಕ ಹರೀಶ್ ಯಾವೂದೆ ಸ್ಪಂದನೆ ನೀಡದೆ ಉಡಾಪೆಯಾಗಿ ವರ್ತಿಸುತ್ತಿದ್ದರು. ಒಂದೊಮ್ಮೆ ಕಡತ ತಯಾರಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ ಕಳುಹಿಸಲಾಗಿದೆ , ಆದರೆ ಕಡತಕ್ಕೆ ಸಂಬಂಧಿಸಿ ಪೂರಕ ದಾಖಲೆಗಳು ದಾಖಲಿಸಿಲ್ಲ ಎಂದು ವಾಪಸ್ಸು ಕಳುಹಿಸಿದ್ದಾರೆ ಎಂದು ಗ್ರಾಮಕರಿಣಿಕರು ತಿಳಿಸಿದ್ದರು. ಆದರೆ ಗ್ರಾಮಕರಣಿಕರು ಕಡತವನ್ನು ಎಸಿ ಕಚೇರಿಗೆ ಕಳುಹಿಸಿದ ಈ ಬಗ್ಗೆ ಎಸಿ ಕಚೇರಿಯಲ್ಲಿ ವಿಚಾರಿಸಿದಾಗ ಯಾವೂದೆ ದಾಖಲೆ ದೊರೆಯಲಿಲ್ಲ, ಕಡತವೂ ಗ್ರಾಮಕರಣಿಕರ ಕಚೇರಿಯಲ್ಲೆ ಇರುವ ಬಗ್ಗೆ ಮಾಹಿತಿ ಲಭಿಸಿತ್ತು, ಮತ್ತೆ ಕಡತವನ್ನು ವಿಲೇವಾರಿ ಮಾಡಲು ಕ್ರಮಕೈಗೊಳ್ಳುತ್ತೇನೆ ಎಂದು ಗ್ರಾಮಕರಣಿಕರು ತಿಳಿಸಿದ್ದರು. ಇದಾದ ಬಳಿಕ ಹಲವು ಬಾರಿ ವಿಚಾರಿಸಿದರೂ ಯಾವೂದೆ ಸ್ಪಂದನೆ ಸಿಗದೆ ಇದ್ದಾಗ ಪ್ರದಾನಿ ಕಾರ್ಯಯಯಕ್ಕೆ ಪತ್ರ ಬರೆಯಲಾಗಿದೆ.

ಈ ಬಗ್ಗೆ ಕಡಬ ತಹಸೀಲ್ದಾರ್ ಅನಂತಶಂಕರ್ ಅವರು ಪ್ರತಿಕ್ರಿಯೆ ನೀಡಿ, ಜಿಲ್ಲಾಧಿಕಾರಿಯವರಿಂದ ನನಗೆ ಯಾವುದೇ ಪತ್ರ ಬಂದಿಲ್ಲ, ಘಟನೆಯ ಬಗ್ಗೆ ಏನು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕೆಗೆ ದಾಖಲೆ ಸಮೇತ ಮಾಹಿತಿ ನೀಡಿದ ಧರ್ಮಪಾಲ ಗೌಡರು ಮಾತನಾಡಿ, ನಾನು 17-03-2020ರಂದು ಅರ್ಜಿ ಸಲ್ಲಿಸಿದ್ದು ಅದರ ಬಳಿಕ ಹಲವಾರು ಬಾರಿ ಗ್ರಾಮ ಕರಣಿಕರ ಕಛೇರಿಗೆ ಅಲೆದಾಟ ನಡೆಸಿದ್ದೆನೆ ಇದರಿಂದ ನೊಂದು ನಾನು ಪ್ರಧಾನಿ ಕಾರ್ಯಲಯಕ್ಕೆ ದೂರಿಕೊಂಡಿದ್ದೆನೆ, ಇದೀಗ ಪ್ರಧಾನಿ ಕಾರ್ಯಲಯದಿಂದ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿ ಅಧಿಕಾರಿಗಳಿಗೆ ಕಳುಹಿಸಲಾದ ಪತ್ರಗಳ ಪ್ರತಿ ನನಗೆ ಕೈ ಸೇರಿದೆ ಎಂದು ಅವರು ಹೇಳಿದ್ದಾರೆ.

You may also like

Leave a Comment