Home » ಠಾಣೆಯಲ್ಲಿ ಬರ್ತ್‌ಡೇ ಆಚರಿಸಿದ ಪಿಎಸೈ | ಪಿಎಸೈ ಅಮಾನತು ಮಾಡಿದ ಎಸ್ಪಿ

ಠಾಣೆಯಲ್ಲಿ ಬರ್ತ್‌ಡೇ ಆಚರಿಸಿದ ಪಿಎಸೈ | ಪಿಎಸೈ ಅಮಾನತು ಮಾಡಿದ ಎಸ್ಪಿ

by Praveen Chennavara
0 comments

ಪೊಲೀಸ್ ಮಹಾನಿರ್ದೇಶಕರ ಆದೇಶ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲಿಯೇ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆರೋಪ ಸಂಬಂಧ ಹಾವೇರಿ ಜಿಲ್ಲೆಯ ಬಂಕಾಪುರ ಠಾಣೆಯ ಪಿಎಸ್ಸೆ ಸಂತೋಷ್ ಪಾಟೀಲ್ ಅನ್ನು ಜಿಲ್ಲಾ ಎಸ್ಪಿ ಹನುಮಂತರಾಯ ಅಮಾನತುಗೊಳಿಸಿದ್ದಾರೆ.

ಇತ್ತೀಚಿಗೆ ಪಿಎಸ್ಸೆ ಸಂತೋಷ್ ಪಾಟೀಲ್ ಅವರು ಯುವಕರ ಗುಂಪಿನೊಂದಿಗೆ ಕೇಕ್ ಕತ್ತರಿಸಿ, ಠಾಣೆಯಲ್ಲಿ ಸಂಭ್ರಮಾಚರಣೆ ಮಾಡಿದ್ದರು.

ಈ ಕುರಿತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಲಾಖೆ ವಿಚಾರಣೆ ಕಾಯ್ದಿರಿಸಿ ಪಿಎಸ್ಸೆ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

You may also like

Leave a Comment