Home » ದ.ಕ.ವಾರಾಂತ್ಯ ಕರ್ಫ್ಯೂ | ಸ್ವಾತಂತ್ರ್ಯ ದಿನಾಚರಣೆಗೂ ಬಡಿದ ಕೊರೊನಾ ಕರಿ ಛಾಯೆ

ದ.ಕ.ವಾರಾಂತ್ಯ ಕರ್ಫ್ಯೂ | ಸ್ವಾತಂತ್ರ್ಯ ದಿನಾಚರಣೆಗೂ ಬಡಿದ ಕೊರೊನಾ ಕರಿ ಛಾಯೆ

by Praveen Chennavara
0 comments

ಗಡಿ ಜಿಲ್ಲೆಯಲ್ಲಿ ಕೊರೊನಾ ಉಲ್ಬಣ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ.

ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಅಪರಾಹ್ನ 2 ಗಂಟೆಯವರೆಗೆ ಅವಕಾಶವಿರಲಿದೆ. ಉಳಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ನಡೆಯಲಿರುವ ವಿ.ವಿ. ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ರವಿವಾರ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಕೂಡ ನಿಗದಿತ ಸಿಬಂದಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

You may also like

Leave a Comment