Home » ಬೆಳ್ತಂಗಡಿ | 25 ಲಕ್ಷ ರೂ. ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ | 25 ಲಕ್ಷ ರೂ. ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಶಾಸಕ ಹರೀಶ್ ಪೂಂಜಾ

by ಹೊಸಕನ್ನಡ
0 comments

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಆಶಾ ಕಾರ್ಯಕರ್ತೆಯರ ಮೊಬೈಲ್ ಫೋನ್ ಸಮಸ್ಯೆಗೆ ಸ್ಪಂದಿಸಿ, 246 ಆಶಾ ಕಾರ್ಯಕರ್ತೆಯರಿಗೆ ಸುಮಾರು 25 ಲಕ್ಷ ವೆಚ್ಚದಲ್ಲಿ ಇಂದು ಮೊಬೈಲ್ ಫೋನ್ ವಿತರಿಸಿದರು.

ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಇಲಾಖೆ ಸಂಬಂಧಿತ ಕೆಲಸ ನಿರ್ವಹಿಸುವಾಗ ಮೊಬೈಲ್ ಫೋನಿನ ಸಮಸ್ಯೆ ಎದುರಿಸುತ್ತಿದ್ದರು.

ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಧ್ವನಿಯಾದ ಶಾಸಕರು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದರು.

ಈಗ 25 ಲಕ್ಷ ವೆಚ್ಚದಲ್ಲಿ 246 ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುವ ಮೂಲಕ ತನ್ನ ಕಾರ್ಯ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

You may also like

Leave a Comment