Home » ಬೆಳ್ತಂಗಡಿ: ಜಲಪಾತ ವೀಕ್ಷಣೆ ಬಂದಿದ್ದ ಕುಟುಂಬ, ಆಳಕ್ಕೆ ಜಾರಿ ಬಿದ್ದ ಐದು ವರ್ಷದ ಮಗು

ಬೆಳ್ತಂಗಡಿ: ಜಲಪಾತ ವೀಕ್ಷಣೆ ಬಂದಿದ್ದ ಕುಟುಂಬ, ಆಳಕ್ಕೆ ಜಾರಿ ಬಿದ್ದ ಐದು ವರ್ಷದ ಮಗು

by ಹೊಸಕನ್ನಡ
0 comments

ಬೆಳ್ತಂಗಡಿ: ಬೆಂಗಳೂರಿನಿಂದ ಅಬ್ಬಿ ಜಲಪಾತ ವೀಕ್ಷಣೆಗಾಗಿ ಬಂದಿದ್ದ ಕುಟುಂಬವೊಂದರ ಐದು ವರ್ಷದ ಮಗುವೊಂದು ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಆ.14 ರಂದು ಮಧ್ಯಾಹ್ನ ನಡೆದಿದೆ.

ಶ್ರೇಯಾ ಎಂಬ ಬಾಲಕಿಯೇ ಗಾಯಗೊಂಡವರು. ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಬೆಳ್ತಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಚಾರಣಿಗರು ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ 17 ಮಂದಿ ಇದ್ದ ಕುಟುಂಬವೊಂದು ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಬಳಗದಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲೊಂದರಿಂದ ಅಲ್ಪ ಆಳಕ್ಕೆ ಜಾರಿ ಬಿದ್ದರು. ಈ ವೇಳೆ ಅವರ ಮುಖ, ತಲೆಗೆ ಹೆಚ್ಚಿನ ಗಾಯವಾದರೆ ಮೈ ಮೇಲೆ ತರಚಿದ ಗಾಯಗಳಾಗಿವೆ.

ತಕ್ಷಣ ಅವರನ್ನು ಕುಟುಂಬಿಕರೇ ಮೇಲೆತ್ತಿಕೊಂಡು ಅತ್ತ ಬಾಳೂರು ಕಡೆಗೇ ಮರಳಿದ್ದಾರೆ .‌ಕಾಲ್ನಡಿಗೆ ದಾರಿ ಮುಗಿದ ಬಳಿಕ ಮಗುವನ್ನು ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಗ್ನಿಶಾಮಕ ಇಲಾಖೆಯ ಮಂಗಳೂರಿನ ಅಧಿಕಾರಿ ಭರತ್, ಬೀಟ್ ಪೊಲೀಸ್ ಇಬ್ರಾಹಿಂ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು. ಆದರೆ ಗಾಯಾಳುಗಳು ತಾವು ಆಗಮಿಸಿದ ಅಬ್ಬಿ ಜಲಪಾತದ ಆ ಕಡೆಯ ಬಾಳೂರು ಭಾಗವಾಗಿ ಮರಳಿದ್ದಾರೆ ಎನ್ನಲಾಗಿದೆ

You may also like

Leave a Comment