Home » ಕಬಕ ಗ್ರಾಮ ಪಂಚಾಯತ್ ಸ್ವಾತಂತ್ರ್ಯೋತ್ಸವ ರಥವನ್ನು ತಡೆಹಿಡಿದು ಧಿಕ್ಕಾರ ಕೂಗಿದ ಎಸ್ ಡಿಪಿಐ ಕಾರ್ಯಕರ್ತರು | ವೀರ ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಹಾಕುವಂತೆ ಕೂಗು

ಕಬಕ ಗ್ರಾಮ ಪಂಚಾಯತ್ ಸ್ವಾತಂತ್ರ್ಯೋತ್ಸವ ರಥವನ್ನು ತಡೆಹಿಡಿದು ಧಿಕ್ಕಾರ ಕೂಗಿದ ಎಸ್ ಡಿಪಿಐ ಕಾರ್ಯಕರ್ತರು | ವೀರ ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೋ ಹಾಕುವಂತೆ ಕೂಗು

by ಹೊಸಕನ್ನಡ
0 comments

ಎಸ್ ಡಿ.ಪಿ.ಐ ಕಾರ್ಯಕರ್ತರು ಸ್ವಾತಂತ್ರ್ಯೋತ್ಸವದ ರಥಕ್ಕೆ ತಡೆ ಒಡ್ಡಿದ ಘಟನೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಇಂದು ನಡೆದಿದೆ.

ಗ್ರಾಮ ಪಂಚಾಯತ್ ರಥಕ್ಕೆ ಪಂಚಾಯತ್ ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷರು ವಿನಯ್ ಕುಮಾರ್ ಕಲ್ಲೇಗ ಚಾಲನೆ ನೀಡಿ ಜೈಕಾರ ಹಾಕುತ್ತಿದ್ದಂತೆಯೇ ಎಸ್.ಡಿ.ಪಿ.ಐ. ಕಾರ್ಯಕರ್ತರು ಧಿಕ್ಕಾರ ಕೂಗಿ ರಥ ಸಂಚಾರಕ್ಕೆ ತಡೆ ಒಡಿದ್ದಾರೆ.

ಅಷ್ಟೇ ಅಲ್ಲದೆ ವೀರಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಹಾಕುವಂತೆ ಘೋಷಣೆ ಕೂಗಿದರು.
ಈ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒರವರು ಸಮಾಧಾನ ಮಾಡಿದರೂ ಕೇಳಿಸಿಕೊಳ್ಳದ ತಂಡ, ಜೋರಾಗಿ ಘೋಷಣೆ ಕೂಗಲು ಆರಂಭಿಸಿತು.

ನಂತರ ಈ ಬಗ್ಗೆ ಮಾಹಿತಿ ದೊರೆತು ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಠಾಣಾ ಇನ್ಸ್ಪೆಕ್ಟರ್ ಗೋಪಾಲ ನಾಯ್ಕ ನೇತೃತ್ವದ ಪೊಲೀಸರ ತಂಡ ಆಗಮಿಸಿ ಪ್ರತಿಭಟನಾಕಾರರ ಗುಂಪನ್ನು ಚದುರಿಸಿದ್ದಾರೆ.

You may also like

Leave a Comment