Home » ಪುತ್ತೂರು : ಸ್ವರಾಜ್ಯ ರಥಕ್ಕೆ ಅಡ್ಡಿ , ಮೂವರು ವಶಕ್ಕೆ

ಪುತ್ತೂರು : ಸ್ವರಾಜ್ಯ ರಥಕ್ಕೆ ಅಡ್ಡಿ , ಮೂವರು ವಶಕ್ಕೆ

by ಹೊಸಕನ್ನಡ
0 comments

ಪುತ್ತೂರು: ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.

ಕಬಕ ಗ್ರಾ.ಪಂ ವತಿಯಿಂದ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಚಾಲನೆ ಕೊಡುವ ಸಂದರ್ಭದಲ್ಲಿ ರಥಯಾತ್ರೆಯಲ್ಲಿದ್ದ ದೇಶ ಭಕ್ತರ ಭಾವಚಿತ್ರದ ಜೊತೆಗೆ ಟಿಪ್ಪು ಸುಲ್ತಾನ್ ಅವರ ಭಾವ ಚಿತ್ರವನ್ನು ಕೂಡಾ ಅಳವಡಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟಿಸಿದರು.

ಈ ಸಂದರ್ಭ ಮಾತಿನ ಚಕಮಕಿ ನಡೆದು ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಸ್ವಾತಂತ್ರ್ಯ ಸ್ವರಾಜ್ಯ ರಥ ಅಡ್ಡಿ ಪಡಿಸಿ ದೇಶದ್ರೋಹದ ಕೃತ್ಯ ಮಾಡಿರುವುದಾಗಿ ಕಬಕ ಗ್ರಾ.ಪಂ ನೀಡಿದ ದೂರಿನಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment