3
ಕಡಬ: ವೀಕೆಂಡ್ ಕರ್ಪ್ಯೂ ವೇಳೆಯೇ ಜ್ಯೂಸ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಅನಧಿಕೃತ ಜ್ಯೂಸ್ ಅಂಗಡಿಯನ್ನು ಬಂದ್ ನಡೆಸಿ ಅಂಗಡಿ ಮಾಲಕನ್ನು ಪೋಲಿಸರು ವಶಕ್ಕೆ ತೆಗೆದುಕೊಂಡ ಘಟನೆ ಆ.15 ರಂದು ಸಂಜೆ ನಡೆದಿದೆ.
ಅಂಗಡಿ ಮಾಲಕ ಪ್ರಾರಂಭದಲ್ಲಿ ನನಗೆ ಪಂಚಾಯತ್ ಅನುಮತಿ ಇದೆ ಎಂದು ಹೇಳಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸಿದ್ದಾರೆ. ಆದರೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ದಾಖಲೆ ಪರಿಶೀಲನೆ ನಡೆಸಿದಾಗ ಸಮೀಪದ ಕಟ್ಟಡದ ಹೆಸರಿನ ಕೊಠಡಿಯ ಪರವಾನಿಗೆ ಪಡೆದುಕೊಂಡು ರಸ್ತೆ ಪರಂಬೋಕುನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿ ಜ್ಯೂಸ್ ಮತ್ತು ಹೋಟೆಲ್ ನಡೆಸುತ್ತಿದ್ದರು ಎಂದು ಅಧಿಕಾರಿಗಳಿಗೆ ತಿಳಿದು ಬಂದಿದೆ.
ಅಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಇನ್ನಷ್ಟೆ ತಿಳಿದು ಬರಬೇಕಿದೆ.
