Home » ಇದ್ದಕ್ಕಿದ್ದಂತೆಯೇ ಮನೆಯಲ್ಲಿ ನಡೆಯಿತು ಭಾರಿ ಸ್ಫೋಟ | ಸ್ಫೋಟದ ಕಾರಣ ನಿಗೂಢ ?!

ಇದ್ದಕ್ಕಿದ್ದಂತೆಯೇ ಮನೆಯಲ್ಲಿ ನಡೆಯಿತು ಭಾರಿ ಸ್ಫೋಟ | ಸ್ಫೋಟದ ಕಾರಣ ನಿಗೂಢ ?!

by ಹೊಸಕನ್ನಡ
0 comments

ಬೆಂಗಳೂರಿನ ಮನೆಯೊಂದರಲ್ಲಿ ಮಧ್ಯರಾತ್ರಿ ಭಾರಿ ಸ್ಫೋಟ ನಡೆದಿದ್ದು, ದಂಪತಿಗಳು ಗಾಯಗೊಂಡ ಘಟನೆ ವಿಜಯನಗರದ ಹಂಪಿನಗರದ ಮನೆಯೊಂದರಲ್ಲಿ ಸಂಭವಿಸಿದೆ.

2 ಮಹಡಿ ಕಟ್ಟಡದ ಮೊದಲ ಮಹಡಿ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ.

ಘಟನೆಯಲ್ಲಿ ಸೂರ್ಯನಾರಾಯಣ ಶೆಟ್ಟಿ, ಪತ್ನಿ ಪುಷ್ಪಾವತಮ್ಮಗೆ ಗಾಯಗಳಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅಕ್ಕಪಕ್ಕದ ಮನೆ ಗಾಜುಗಳು ಪುಡಿ, ಪುಡಿಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಈ ಸ್ಫೋಟದ ಶಬ್ದಕ್ಕೆ ಅಕ್ಕಪಕ್ಕದ ಜನ ಬೆಚ್ಚಿಬಿದ್ದಿದ್ದಾರೆ.

ಅಕ್ಕಪಕ್ಕದ 5ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಯ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿದೆ. ಸುಮಾರು 1 ಕಿ.ಮೀ.ವರೆಗೂ ಸ್ಫೋಟದ ಸದ್ದು ಕೇಳಿಸಿದೆ ಎಂದು ತಿಳಿದುಬಂದಿದೆ.

ಸದ್ಯ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

You may also like

Leave a Comment