Home » ಕೊತ್ತಂಬರಿ ಸೊಪ್ಪು ಖರೀದಿಸಲು ನಿರಾಕರಿಸಿದ ಕ್ಷುಲ್ಲಕ ಕಾರಣಕ್ಕೆ ಗ್ರಾಹಕನ ಮೇಲೆ ವ್ಯಾಪಾರಿಯ ಹಲ್ಲೆ

ಕೊತ್ತಂಬರಿ ಸೊಪ್ಪು ಖರೀದಿಸಲು ನಿರಾಕರಿಸಿದ ಕ್ಷುಲ್ಲಕ ಕಾರಣಕ್ಕೆ ಗ್ರಾಹಕನ ಮೇಲೆ ವ್ಯಾಪಾರಿಯ ಹಲ್ಲೆ

0 comments

ಗ್ರಾಹಕ ಕೊತ್ತಂಬರಿ ಸೊಪ್ಪು ಖರೀದಿಸಲು ನಿರಾಕರಿಸಿದಕ್ಕೆ ವ್ಯಾಪಾರಸ್ಥ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಗೌಳಿಗಲ್ಲಿಯಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಮಹಮ್ಮದಗೌಸ್ ಬಿಜಾಪುರ ಎಂಬುವವರು ಪ್ರತಿದಿನ ಕೊತ್ತಂಬರಿ ಸೊಪ್ಪನ್ನು ವ್ಯಾಪಾರಿ ಖಾದರ್ ಎಂಬುವವರ ಬಳಿ ಖರೀದಿಸುತ್ತಿದ್ದನು.

ಆದರೆ ನಿನ್ನೆ ತಾಜಾ ಕೊತ್ತಂಬರಿ ಸೊಪ್ಪು ಇಲ್ಲವೆಂದು ಕೊತ್ತಂಬರಿ ಸೊಪ್ಪು ಖರೀದಿ ಮಾಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಖಾದರ್ ಹಾಗೂ ಆತನ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.
ಸದ್ಯ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment