Home » ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕರಾವಳಿಯ ವ್ಯಕ್ತಿ ವಾಯುಪಡೆಯ ಏರ್ ಲಿಫ್ಟ್ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ

ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಕರಾವಳಿಯ ವ್ಯಕ್ತಿ ವಾಯುಪಡೆಯ ಏರ್ ಲಿಫ್ಟ್ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ

0 comments

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗುತ್ತಿದ್ದಂತೆ ಅಲ್ಲಿರುವ ಸಾವಿರಾರು ಭಾರತೀಯರನ್ನು ವಾಯುಪಡೆ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತಿದ್ದು, ಅಫ್ಘನ್ ನಲ್ಲಿದ್ದ ಮಂಗಳೂರಿನ ವ್ಯಕ್ತಿ ಕೂಡ ಭಾರತಕ್ಕೆ ಮರಳಿದ್ದಾರೆ.

ಮೆಲ್ವಿನ್ ಮೊಂತೇರೋ ಎಂಬ ಉಳ್ಳಾಲದ ವ್ಯಕ್ತಿ ಕಾಬೂಲ್ ನಲ್ಲಿರುವ ನ್ಯಾಟೋ ಪಡೆಯ ಮಿಲಿಟರಿ ಬೇಸ್ ಕ್ಯಾಂಪ್ ಆಸ್ಪತ್ರೆಯಲ್ಲಿ ಇಲೆಕ್ನಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕರಾವಳಿಯ ಈ ನಿವಾಸಿ ಇದೀಗ ಸುರಕ್ಷಿತವಾಗಿ ಭಾರತಕ್ಕೆ ಮರಳಿ ಬಂದಿದ್ದಾರೆ.

ಮೆಲ್ವಿನ್ ವಾಯುಪಡೆ ವಿಮಾನದಲ್ಲಿ ಮರಳಿ ತಾಯ್ತಾಡಿಗೆ ಬಂದಿದ್ದಾರೆ. ಕಾಬೂಲನ್ನು ಉಗ್ರರು ಮುತ್ತಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಜನರು ಏರ್‌ಫೋರ್ಸ್ ಬಳಿ ಸೇರಿದ್ದರು. ಅಲ್ಲಿನ ನಿವಾಸಿಗಳೆಲ್ಲ ಏರ್‌ಫೋರ್ಸ್ ಒಳಗೆ ಸೇರಿದ್ದರಿಂದ ವಿಮಾನಗಳು ಇಳಿಯಲಾಗದೆ ಬರಲು ಕಷ್ಟವಾಗಿತ್ತು. ಆದರೂ ನಮ್ಮ ಸಂಸ್ಥೆಯವರು ಸಿಬ್ಬಂದಿಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಮೆಲ್ವಿನ್ ಮೊಂತೇರೋ ತಿಳಿಸಿದ್ದಾರೆ.

You may also like

Leave a Comment