Home » ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಾದರಕ್ಷೆ ಮಳಿಗೆಗೆ ಬೆಂಕಿ,ಲಕ್ಷಾಂತರ ರೂ.ನಷ್ಟ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಾದರಕ್ಷೆ ಮಳಿಗೆಗೆ ಬೆಂಕಿ,ಲಕ್ಷಾಂತರ ರೂ.ನಷ್ಟ

0 comments

ಉಡುಪಿ : ಮಣಿಪಾಲದ ಲಕ್ಷ್ಮೀಂದ್ರ ನಗರ ಸಮೀಪದ ಕಟ್ಟಡವೊಂದರಲ್ಲಿರುವ ವುಡ್ ಲ್ಯಾಂಡ್ ಪಾದರಕ್ಷೆ ಮಳಿಗೆಯಲ್ಲಿ ಗುರುವಾರ ರಾತ್ರಿ 10ಗಂಟೆಯ ಸುಮಾರಿಗೆ ಅಗ್ನಿ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿದೆ.

ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ದುರಂತ ಸಂಭವಿಸಿದ್ದು ಈ ಘಟನೆಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಪಾದರಕ್ಷೆಗಳು ಸುಟ್ಟು ಭಸ್ಮವಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಮತ್ತು ಮಲ್ಪೆ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಬೆಳಗಿನ ಜಾವ 4.30ರ ಸುಮಾರಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

You may also like

Leave a Comment