Home » ಕೇವಲ 2,500 ರೂ. ಹಣದಾಸೆಗೆ ತಂದೆಯನ್ನು ಕೊಂದ ಕ್ರೂರಿ ಮಗ

ಕೇವಲ 2,500 ರೂ. ಹಣದಾಸೆಗೆ ತಂದೆಯನ್ನು ಕೊಂದ ಕ್ರೂರಿ ಮಗ

by ಹೊಸಕನ್ನಡ
0 comments

ಕೇವಲ ಎರಡೂವರೆ ಸಾವಿರ ರೂಪಾಯಿಗಾಗಿ ತಂದೆಯನ್ನು ಮಗನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಿಂಡ್ರಾ ಗ್ರಾಮದಲ್ಲಿ ನಡೆದಿದೆ.

ಮಹದೇವ್ ಉರಾಂವ್ ತಂದೆಯನ್ನು ಕೊಂದ ಪಾಪಿ ಮಗ. ಬೆಳಗಿನ ಜಾವ ಮಲಗಿದ್ದ ತಂದೆಯನ್ನು ಕೊಂದು, ಮಹದೇವ್ ಓಡಿ ಹೋಗಿದ್ದಾನೆ. ಆದರೆ ಗ್ರಾಮಸ್ಥರು ಆರೋಪಿಯನ್ನು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಹದೇವ್ ತಂದೆ ಜಮೀನಿನ ಒಂದು ಚಿಕ್ಕ ಭಾಗವನ್ನು ಮಾರಿದ್ದರು. ಈ ಮಾರಾಟದಿಂದ 5,200 ರೂಪಾಯಿ ಸಿಕ್ಕಿತ್ತು. ತಂದೆ-ಮಗ ಇಬ್ಬರೂ 2,500 ರೂ. ಹಂಚಿಕೊಂಡಿದ್ದರು. ಆದ್ರೆ ಮರುದಿನ ಬೆಳಗ್ಗೆ 4 ಗಂಟೆಗೆ ತಂದೆಯನ್ನು ಕೊಂದು ತಂದೆಯ ಹಣ ಎತ್ಕೊಂಡು ಮಹದೇವ್ ಪರಾರಿಯಾಗಿದ್ದನು.

ಕೊಲೆ ನಡೆದ ಹಿಂದಿನ ರಾತ್ರಿ ಅಪ್ಪ-ಮಗನ ನಡುವೆ ಹಣದ ವಿಚಾರವಾಗಿ ಜಗಳ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

You may also like

Leave a Comment