Home » ಅಫ್ಘಾನಿಸ್ತಾನದಲ್ಲಿ ಮುಂದುವರಿದ ತಾಲಿಬಾನಿಗಳ ಅಟ್ಟಹಾಸ | ಉಕ್ರೇನ್ ವಿಮಾನವನ್ನೇ ಹೈಜಾಕ್ ಮಾಡಿದ ತಾಲಿಬಾನ್ ರಕ್ಕಸರು !?

ಅಫ್ಘಾನಿಸ್ತಾನದಲ್ಲಿ ಮುಂದುವರಿದ ತಾಲಿಬಾನಿಗಳ ಅಟ್ಟಹಾಸ | ಉಕ್ರೇನ್ ವಿಮಾನವನ್ನೇ ಹೈಜಾಕ್ ಮಾಡಿದ ತಾಲಿಬಾನ್ ರಕ್ಕಸರು !?

by ಹೊಸಕನ್ನಡ
0 comments

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಕಾಬುಲ್‌ನಿಂದ ಉಕ್ರೇನಿಯನ್ ನಿವಾಸಿಗಳನ್ನು ಕರೆದೊಯ್ಯುತ್ತಿದ್ದ ಉಕ್ರೇನ್ ವಿಮಾನವನ್ನೇ ತಾಲಿಬಾನಿಗಳು ಹೈಜಾಕ್ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಹೈಜಾಕ್ ಮಾಡಿದ ವಿಮಾನವನ್ನು ಇರಾನ್‌ಗೆ ಹಾರಿಸಿಕೊಂಡು ಹೋಗಿದ್ದಾರೆಂದು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವೈನಿ ಯೆನಿನ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ಭಾನುವಾರ ನಮ್ಮ ದೇಶದ ವಿಮಾನವನ್ನು ಯಾರೋ ಹೈಜಾಕ್ ಮಾಡಿದ್ದಾರೆ. ಪ್ರಯಾಣಿಕರ ಸೋಗಿನಲ್ಲಿದ್ದ ಅಪರಿಚಿತ ಗುಂಪುಗಳು ಉಕ್ರೇನಿಯನ್ನರನ್ನು ಏರ್ ಲಿಫ್ಟಿಂಗ್ ಮಾಡುವ ಬದಲು ವಿಮಾನವನ್ನು ಇರಾನ್‌ಗೆ ಹಾರಿಸಿಕೊಂಡು ಹೋಗಿದ್ದಾರೆ. ಅಲ್ಲದೆ, ನಮ್ಮ ಜನರು ವಿಮಾನ ನಿಲ್ದಾಣಕ್ಕೆ ಬರಲು ಸಾಧ್ಯವಾಗದೇ, ನಮ್ಮ ಮುಂದಿನ ಮೂರು ನಾಗರಿಕರನ್ನು ತಾಯ್ನಾಡಿಗೆ ಸ್ಥಳಾಂತರಿಸುವ ಪ್ರಯತ್ನಗಳು ಕೂಡ ಯಶಸ್ವಿಯಾಗಲಿಲ್ಲ ಎಂದು ಯೆವೈನಿ ಯೆನಿನ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment