Home » ಸಾಲ ಹಿಂತಿರುಗಿಸದ ಕಾರಣ ಸಾಲಗಾರನ ಮನೆಗೆ ನುಗ್ಗಿ, ಆತನ ಮೂವರು ಅಪ್ರಾಪ್ತ ಮಕ್ಕಳನ್ನು ಕಿಡ್ನಾಪ್ ಮಾಡಿದ ಭೂಪ !!

ಸಾಲ ಹಿಂತಿರುಗಿಸದ ಕಾರಣ ಸಾಲಗಾರನ ಮನೆಗೆ ನುಗ್ಗಿ, ಆತನ ಮೂವರು ಅಪ್ರಾಪ್ತ ಮಕ್ಕಳನ್ನು ಕಿಡ್ನಾಪ್ ಮಾಡಿದ ಭೂಪ !!

0 comments

ಇತರರಿಗೆ ಸಾಲ ನೀಡಿ ಅವರು ಹಿಂದಿರುಗಿಸದಿದ್ದಾಗ ಜಗಳ ಮಾಡಿ ಅದು ಕೊಲೆ ತನಕ ಹೋಗುವುದು ಇತ್ತೀಚಿಗೆ ಹೆಚ್ಚೇ ಆಗಿದೆ. ಆದರೆ ಇಲ್ಲೊಂದು ಕಡೆ ವಿಚಿತ್ರ ಏನಂದ್ರೆ, ಸಾಲ ಮರುಪಾವತಿ ಮಾಡಿಲ್ಲ ಎಂದು ಆತನ ಮಕ್ಕಳನ್ನೇ ಎತ್ತಾಕೊಂಡು ಹೋದ ಘಟನೆ ತಮಿಳುನಾಡು ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಡೆದಿದೆ.

ರಾಜನ್ ಎಂಬ 38 ವಯಸ್ಸಿನ ವ್ಯಕ್ತಿ, ರಘು ಎಂಬುವವರಿಗೆ ಸಾಲ ನೀಡಿದ್ದು, ಸಾಲ ಹಿಂತಿರುಗಿಸಿಲ್ಲ ಎಂದು ಆತನ ಅಪ್ರಾಪ್ತ ಮಕ್ಕಳನ್ನು ಕಿಡ್ನಾಪ್ ಮಾಡಿ ಒತ್ತೆ ಇಟ್ಟುಕೊಂಡಿದ್ದಾನೆ.

ಒಂದು ವರ್ಷದ ಹಿಂದೆ ರಾಜನ್ ತನ್ನ ಪತ್ನಿಯ ಸಂಬಂಧಿಕರಾದ ರಘು ಎಂಬುವವರಿಗೆ 2.80 ಲಕ್ಷ ರೂ. ಸಾಲ ಕೊಟ್ಟಿದ್ದರು. ಆದರೆ ಅದನ್ನು ವರ್ಷಗಳು ಕಳೆದರೂ ರಘು ಹಿಂದಿರುಗಿಸಿರಲಿಲ್ಲ.

ಇದರಿಂದ ಕೋಪಗೊಂಡ ರಾಜನ್, ರಘು ಮತ್ತು ಆತನ ಪತ್ನಿ ಹೊರಗೆ ಹೋಗಿದ್ದ ಸಮಯದಲ್ಲಿ ಆತನ ಮನೆಗೆ ನುಗ್ಗಿ, ಮೂವರು ಮಕ್ಕಳನ್ನು ಎತ್ತಿಕೊಂಡು ಹೋಗಿದ್ದಾನೆ.

ಬಳಿಕ ರಘು ಹಾಗೂ ಪತ್ನಿ ಮನೆಗೆ ವಾಪಾಸಾದಾಗ ಮನೆಯಲ್ಲಿ ಮಕ್ಕಳಿಲ್ಲದ್ದನ್ನು ಕಂಡು ಗಾಬರಿಗೊಂಡರು. ನಂತರ ಅನುಮಾನಗೊಂಡ ರಘು, ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜನ್‍ನನ್ನು ಬಂಧಿಸಲಾಗಿದೆ.

You may also like

Leave a Comment