Home » ನಾವು ಆತ್ಮಹತ್ಯೆ ಮಾಡುತ್ತಿದ್ದೇವೆ ಎಂದು ವ್ಯಾಟ್ಸಾಪ್ ಸಂದೇಶ ಕಳಿಸಿ ಕುಟುಂಬ ಸಹಿತ ಕಾರಿನಲ್ಲಿ ನದಿಗೆ ಬಿದ್ದರು | ಇಬ್ಬರ ರಕ್ಷಣೆ ,ಇಬ್ಬರು ನಾಪತ್ತೆ

ನಾವು ಆತ್ಮಹತ್ಯೆ ಮಾಡುತ್ತಿದ್ದೇವೆ ಎಂದು ವ್ಯಾಟ್ಸಾಪ್ ಸಂದೇಶ ಕಳಿಸಿ ಕುಟುಂಬ ಸಹಿತ ಕಾರಿನಲ್ಲಿ ನದಿಗೆ ಬಿದ್ದರು | ಇಬ್ಬರ ರಕ್ಷಣೆ ,ಇಬ್ಬರು ನಾಪತ್ತೆ

by Praveen Chennavara
0 comments

ನಾವು ಆತ್ಮಹತ್ಯೆ ಮಾಡುತ್ತಿದ್ದೇವೆಂದು ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಮಾಡಿ ಕಾರು ಸಮೇತ ಭದ್ರಾ ನದಿಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ಗುರುವಾರ ನಡೆದಿದೆ.

ಘಟನೆಯಲ್ಲಿ ತಾಯಿ ನೀತು (35 ವರ್ಷ) ಹಾಗೂ ಮಗ ಧ್ಯಾನ್ (13 ವರ್ಷ) ಇಬ್ಬರನ್ನು ರಕ್ಷಿಸಿದ್ದು ನೀತು ಪತಿ ಮಂಜು ಹಾಗೂ ಅತ್ತೆ ಸುನಂದಮ್ಮ ನೀರಿನಲ್ಲಿ ಮುಳುಗಿದ್ದು ಶೋಧಕಾರ್ಯ ನಡೆದಿದೆ.

ಇವರು ಮೂಲತಃ ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆಯವರು ಎನ್ನಲಾಗಿದೆ.

ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ, ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ

You may also like

Leave a Comment