Home » ಅಕ್ರಮ ಸಕ್ರಮ ಸಮಿತಿ ಸದಸ್ಯನ ಕಿರುಕುಳ ಆರೋಪ | ರೆವಿನ್ಯೂ ಇನ್ಸ್ಪೆಕ್ಟರ್ ನೀರಿಗೆ ಹಾರಿ ಆತ್ಮಹತ್ಯೆ

ಅಕ್ರಮ ಸಕ್ರಮ ಸಮಿತಿ ಸದಸ್ಯನ ಕಿರುಕುಳ ಆರೋಪ | ರೆವಿನ್ಯೂ ಇನ್ಸ್ಪೆಕ್ಟರ್ ನೀರಿಗೆ ಹಾರಿ ಆತ್ಮಹತ್ಯೆ

0 comments

ಚಿಕ್ಕಮಗಳೂರು: ಅಕ್ರಮ-ಸಕ್ರಮ ಸಮಿತಿ ಸದಸ್ಯರು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ರೆವಿನ್ಯೂ ಇನ್ಸ್ ಪೆಕ್ಟರ್ ಒಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ.

ಮೃತರನ್ನು ತರಿಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಸೋಮಶೇಖರ್ ಎಂದು ಗುರುತಿಸಲಾಗಿದ್ದು, ಡೆತ್ ನೋಟ್ ನ್ನು ಬರೆದು ಇಟ್ಟು ಅವರು ಕಾಲುವೆಗೆ ಧುಮುಕಿದ್ದಾರೆ. ಕೆಲವು ಪ್ರಸಿದ್ಧ ರಾಜಕೀಯ ವ್ಯಕ್ತಿಗಳು ತಮ್ಮ ಪರವಾಗಿ ಸರ್ಕಾರದ ನಿಯಮಗಳನ್ನು ಬೈಪಾಸ್ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಾಳೆಹೊನ್ನೂರಿನಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಅವರಿಗೆ ಇತ್ತೀಚೆಗೆ ಕಂದಾಯ ನಿರೀಕ್ಷಕರಾಗಿ ಬಡ್ತಿ ನೀಡಲಾಗಿತ್ತು. ನಂತರ ಅವರನ್ನು ಲಕ್ಕವಳ್ಳಿಯ ಕಂದಾಯ ವ್ಯಾಪ್ತಿಗೆ ನೇಮಿಸಲಾಯಿತು. ಸ್ಥಳೀಯ ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಧನಪಾಲ್ ಎಂಬವರು ಒತ್ತುವರಿ ಮಾಡಿಕೊಂಡಿದ್ದ ಹುಲ್ಲುಗಾವಲು ಪ್ರದೇಶವನ್ನು ಕ್ರಮಬದ್ಧಗೊಳಿಸಲು ಒತ್ತಾಯಿಸುತ್ತಿದ್ದಾನೆ ಎಂದು ಡೆತ್ ನೋಟ್ ನಲ್ಲಿ ಆರೋಪಿಸಿದ್ದಾರೆ.

You may also like

Leave a Comment