Home » ಉಳ್ಳಾಲ: ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರನನ್ನು ರಕ್ಷಿಸಿದ ಹಿಂದೂ ಯುವಕರ ತಂಡ!!ಜೀವನ್ಮರಣ ಸ್ಥಿತಿಯಲ್ಲಿ ಜಾತಿ ಬೇಧ ಮರೆತು ರಕ್ಷಣೆಗೆ ನಿಂತ ಕಾರ್ಯಕ್ಕೊಂದು ಹ್ಯಾಟ್ಸಾಫ್

ಉಳ್ಳಾಲ: ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರನನ್ನು ರಕ್ಷಿಸಿದ ಹಿಂದೂ ಯುವಕರ ತಂಡ!!ಜೀವನ್ಮರಣ ಸ್ಥಿತಿಯಲ್ಲಿ ಜಾತಿ ಬೇಧ ಮರೆತು ರಕ್ಷಣೆಗೆ ನಿಂತ ಕಾರ್ಯಕ್ಕೊಂದು ಹ್ಯಾಟ್ಸಾಫ್

0 comments

ಉಳ್ಳಾಲ: ಕರಾವಳಿ ಪ್ರದೇಶದಲ್ಲಿ ತೀರಾ ಮಳೆಯಾಗುತ್ತಿದ್ದೂ, ಈ ನಡುವೆ ಉಳ್ಳಾಲ ಸಮುದ್ರದಲ್ಲಿ ಮೀನುಗಾರನೊಬ್ಬ ಬಲೆ ಎಸೆಯುವಾಗ ಅಪ್ಪಳಿಸಿದ ಅಲೆಯ ರಭಸಕ್ಕೆ ಸಮುದ್ರ ಪಾಲಾಗಿದ್ದು,ಕೂಡಲೇ ನಾಡದೋಣಿಯಲ್ಲಿ ಸಾಗುತ್ತಿದ್ದ ಯುವಕರ ತಂಡ ರಕ್ಷಣೆಗೆ ಧಾವಿಸಿದ್ದು, ಸುಮಾರು ಅರ್ಧ ಗಂಟೆಯ ಸೆಣಸಾಟ ನಡೆಸಿದ ಬಳಿಕ ಬದುಕುಳಿದಿದ್ದಾನೆ.

ಸಮುದ್ರದಲ್ಲಿ ಬಲೆ ಬೀಸುತ್ತಿದ್ದ ಮೀನುಗಾರ ಬೆಂಗರೆ ನಿವಾಸಿ ನವಾಜ್ ಎನ್ನುವಾತ ಅಲೆ ಅಪ್ಪಳಿಸಿದ ಪರಿಣಾಮ ಸಮುದ್ರಕ್ಕೆ ಎಸೆಯಲ್ಪಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದಾಗ ನಾಡದೋಣಿಯಲ್ಲಿ ಸಾಗುತ್ತಿದ್ದ ಯುವಕರಾದ ಪ್ರೇಮ್ ಪ್ರಕಾಶ್, ಸೂರ್ಯ ಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬಂಗೇರ ಮತ್ತು ರಿತೇಶ್ ಎನ್ನುವವರು ಕೂಡಲೇ ರಕ್ಷಣೆಗೆ ಧಾವಿಸಿದ್ದು ಜಾತಿ ಬೇಧ ಮರೆತು ಯುವಕನನ್ನು ರಕ್ಷಿಸಿದ್ದಾರೆ. ಸದ್ಯ ರಕ್ಷಣೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಯುವಕರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

You may also like

Leave a Comment