Home » ಪುತ್ತೂರು : ವೀಕೆಂಡ್ ಕರ್ಫ್ಯೂ ನಡುವೆ ಅಕ್ರಮವಾಗಿ ಮದ್ಯ ಮಾರಾಟ | ಓರ್ವನ ಬಂಧನ

ಪುತ್ತೂರು : ವೀಕೆಂಡ್ ಕರ್ಫ್ಯೂ ನಡುವೆ ಅಕ್ರಮವಾಗಿ ಮದ್ಯ ಮಾರಾಟ | ಓರ್ವನ ಬಂಧನ

by Praveen Chennavara
0 comments

ಪುತ್ತೂರು: ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಾಣಾಜೆ ಗ್ರಾಮದ ಆರ್ಲಪದವು ಪ್ರಯಾಣಿಕರ ತಂಗುದಾಣದ ಹಿಂಬದಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆರೋಪಿಯಲ್ಲಿದ್ದ ಮದ್ಯ ಮತ್ತು ನಗದನ್ನು ಆ .29 ರಂದು ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಜೇಶ್ವರ ತಾಲೂಕಿನ ಏಣ್ಮಕಜೆ ಗ್ರಾಮದ ಪೆರ್ಲತ್ತಡ್ಕ ನಿವಾಸಿ ಕೃಷ್ಣ ನಾಯ್ಕ್ ಬಂಧಿತ ಆರೋಪಿ.

ಆರ್ಲಪದವು ಪ್ರಯಾಣಿಕರ ತಂಗುದಾಣದ ಹಿಂಬದಿ ಅಕ್ರಮವಾಗಿ ಮದ್ಯವನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದರು.ಪೊಲೀಸರು ದಾಳಿ ನಡೆಸಿದ ವೇಳೆ ಮದ್ಯ ಖರೀದಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ರೂ.1,120 ಮೌಲ್ಯದ ಮದ್ಯ, ಮದ್ಯ ಮಾರಟದಿಂದ ಬಂದ ರೂ. 1,450 ನಗದನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

You may also like

Leave a Comment