Home » ಕಡಬ : ದ್ವಿಚಕ್ರ ವಾಹನಗಳ ನಡುವೆ ಅಪಘಾತ | ಸವಾರರಿಗೆ ಗಾಯ

ಕಡಬ : ದ್ವಿಚಕ್ರ ವಾಹನಗಳ ನಡುವೆ ಅಪಘಾತ | ಸವಾರರಿಗೆ ಗಾಯ

0 comments

ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಕಡಬ ಪೇಟೆಯ ಗಣೇಶ್ ಬಿಲ್ಡಿಂಗ್ ಬಳಿ ಬುಧವಾರದಂದು ಸಂಭವಿಸಿದೆ.

ಕಳಾರದಿಂದ ಕಡಬ ಕಡಗೆ ಬರುತ್ತಿದ್ದ ಹೀರೋ ಮೆಸ್ಟೋ ವಾಹನ ಸವಾರ ಪೊಲೀಸ್ ವಾಹನವನ್ನು ಕಂಡು ಎಡಬದಿಗೆ ತಿರುಗಿಸಿದ್ದು, ಈ ಸಂದರ್ಭದಲ್ಲಿ ಮುಂದಿನಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ.

ಸಣ್ಣಪುಟ್ಟ ಗಾಯಗೊಂಡ ವಾಹನ ಸವಾರರನ್ನು ತಕ್ಷಣವೇ ಪೊಲೀಸ್ ವಾಹನದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

You may also like

Leave a Comment