Home » ಕಾರ್ಕಳ | ಹಲ್ಲುಜ್ಜುವ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವೃದ್ಧೆ | ಉದುರಿದ್ದು ಹಲ್ಲುಗಳಲ್ಲ, ಆಕೆಯ ಪ್ರಾಣ !!

ಕಾರ್ಕಳ | ಹಲ್ಲುಜ್ಜುವ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ವೃದ್ಧೆ | ಉದುರಿದ್ದು ಹಲ್ಲುಗಳಲ್ಲ, ಆಕೆಯ ಪ್ರಾಣ !!

0 comments

ಹಲ್ಲು ಉಜ್ಜುವ ಪೇಸ್ಟ್ ಎಂದು ತಪ್ಪಾಗಿ ತಿಳಿದ ವೃದ್ಧೆಯೊಬ್ಬರು ಇಲಿ ಪಾಷಾಣದ ಪೇಸ್ಟ್ ನಲ್ಲಿ ಹಲ್ಲುಜ್ಜಿ ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಾಬೆಟ್ಟು ಎಂಬಲ್ಲಿ ನಡೆದಿದೆ.

ಕಲಾವತಿ (61) ಎಂಬುವವರು ಮೃತಪಟ್ಟ ವೃದ್ಧೆ ಎಂದು ತಿಳಿದುಬಂದಿದೆ.

ಹಲ್ಲುಜ್ಜಿದ ಬಳಿಕ ಕಲಾವತಿಯವರು ಅಸ್ವಸ್ಥರಾಗಿದ್ದರು.
ನಂತರ ಅವರನ್ನು ಕಾರ್ಕಳ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

You may also like

Leave a Comment