Home » ಕೋಳಿ ಜಗಳ : ಚೂರಿ ಇರಿತದಲ್ಲಿ ಅಂತ್ಯ | ಗಂಭೀರ ಗಾಯಗೊಂಡು ವೆನ್ಲಾಕ್‌ಗೆ ದಾಖಲು

ಕೋಳಿ ಜಗಳ : ಚೂರಿ ಇರಿತದಲ್ಲಿ ಅಂತ್ಯ | ಗಂಭೀರ ಗಾಯಗೊಂಡು ವೆನ್ಲಾಕ್‌ಗೆ ದಾಖಲು

by Praveen Chennavara
0 comments

ಮಂಗಳೂರು: ಸೆ 3 : ಯುವಕನೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಘಟನೆ ಗುರುವಾರ ತಡರಾತ್ರಿ ಮಂಗಳೂರಿನ ಹೊರವಲಯ ಎದುರುಪದವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ನಿಂಗಣ್ಣ ವ್ಯಕ್ತಿ ಎನ್ನಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಉಂಟಾದ ಕೋಳಿ ಜಗಳ ಚೂರಿಇರಿತದವರೆಗೆ ತಲುಪಿದೆ ಎಂದು ಹೇಳಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಮೊದಲು ತಂಡ ಹಾಗೂ ನಿಂಗಣ್ಣರವರ ಮಧ್ಯೆ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ ಆರಂಭಗೊಂಡಿದೆ, ಬಳಿಕ ಅದು ತಾರಕಕ್ಕೇರಿದೆ.

ಈ ಸಂದರ್ಭ ಎದುರಾಳಿ ತಂಡವು ನಿಂಗಣ್ಣ ಅವರ ತಲೆಗೆ ಚೂರಿಯಿಂದ ಇರಿದಿದೆ ಎಂದು ತಿಳಿದು ಬಂದಿದೆ. ಪರಿಣಾಮ ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿದೆ. ಸ್ಥಳೀಯರು ಗಾಯಾಳುವನ್ನು ನಗರದ ಜಿಲ್ಲಾ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಹಾಗೂ ವೆಸ್ಲಾಕ್ ಆಸ್ಪತ್ರೆಗೆ ಕಾವೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

You may also like

Leave a Comment