Home » ಮದುವೆಯಾಗುತ್ತೇನೆಂದು ಸುರತ್ಕಲ್ ನ ಯುವತಿಯಿಂದ ಹಣ ಪಡೆದುಕೊಂಡ, ತನಗೆ ಬೇಕಾದ ರೀತಿ ಉಪಯೋಗಿಸಿ ಪರಾರಿಯಾದ!!ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಆತನ ಹಿಸ್ಟರಿ ತೆಗೆದಾಗ ಕಾದಿತ್ತು ಶಾಕ್

ಮದುವೆಯಾಗುತ್ತೇನೆಂದು ಸುರತ್ಕಲ್ ನ ಯುವತಿಯಿಂದ ಹಣ ಪಡೆದುಕೊಂಡ, ತನಗೆ ಬೇಕಾದ ರೀತಿ ಉಪಯೋಗಿಸಿ ಪರಾರಿಯಾದ!!ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಆತನ ಹಿಸ್ಟರಿ ತೆಗೆದಾಗ ಕಾದಿತ್ತು ಶಾಕ್

0 comments

ಮಂಗಳೂರಿನ ಯುವತಿಯೊಬ್ಬಳನ್ನು ಮದುವೆಯಾಗುತ್ತೇನೆಂದು ನಂಬಿಸಿ ಬಳಸಿಕೊಂಡಿದ್ದಲ್ಲದೇ, ಆಕೆಯಿಂದ ಹಣವನ್ನು ಪಡೆದುಕೊಂಡು ಆ ಬಳಿಕ ನಾಪತ್ತೆಯಾಗಿದ್ದ ಖತರ್ನಾಕ್ ಯುವಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಜಯಪುರ ನಿವಾಸಿ ಜಗನ್ನಾಥ್ ಎಂದು ಗುರುತಿಸಲಾಗಿದೆ.

ಘಟನೆ ವಿವರ :ತಾನು ಸಿವಿಲ್ ಇಂಜಿನಿಯರ್ ಎಂದು ವಧು ಹುಡುಕಲು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪ್ರೊಪೈಲ್ ಒಂದನ್ನು ಹಾಕಿಕೊಂಡಿದ್ದ ಯುವಕ,ಹಲವರು ಯುವತಿಯರಿಗೆ ಮದುವೆ ಪ್ರಸ್ತಾಪ ಕಳಿಸಿ ಅವರ ವಿಶ್ವಾಸ ಗಿಟ್ಟಿಸಿಕೊಂಡು, ತನಗೆ ಬೇಕಾದ ರೀತಿ ಬಳಸಿಕೊಂಡು ಆ ಬಳಿಕ ನಾಪತ್ತೆಯಾಗುತ್ತಿದ್ದ.

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ತಾನು ಉಳ್ಳಾಲದ ನಿವಾಸಿಯೆಂದು ಹೇಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸುರತ್ಕಲ್‌ನ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿದ್ದ.

ನಾನು ಮನೆ ಖರೀದಿಸುತ್ತಿದ್ದೇನೆ,ಸ್ವಲ್ಪ ಹಣದ ಅವಶ್ಯಕತೆ ಇದೆ ಎಂದು ಆಕೆಯನ್ನು ನಂಬಿಸಿ 3 ಲಕ್ಷ ರೂ. ಸಾಲ ಪೀಕಿಸಿದ್ದ. ಹೇಗೂ ಮದುವೆ ಆಗುವ ಹುಡುಗ ಎಂದು ಆಕೆ ತನ್ನ ಚಿನ್ನವನ್ನು ಫೈನಾನ್ಸ್‌ನಲ್ಲಿ ಅಡವಿಟ್ಟು ಹಣ ನೀಡಿದ್ದಳು. ಇದರಲ್ಲಿ ಒಂದೂವರೆ ಲಕ್ಷ ರೂ. ಮರಳಿಸಿದ್ದ ಆತ ಸ್ವಲ್ಪ ದಿನಗಳ ನಂತರ ನಂಬಿಸಿ ಆ ಹಣವನ್ನೂ ಆಕೆಯಿಂದ ವಾಪಸ್ ಪಡೆದಿದ್ದ. ಬಳಿಕ ಜಗನ್ನಾಥ್ ನಾಪತ್ತೆಯಾಗಿದ್ದ. ಭಯಗೊಂಡ ಯುವತಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ, ಈತ ಇದೇ ರೀತಿ ಹಲವು ಮಹಿಳೆಯರಿಂದ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಎಂಬುದು ಬಯಲಾಗಿದೆ.

You may also like

Leave a Comment