Home » ರೈಲಿನಲ್ಲಿ ಪ್ರಯಾಣಿಸುವಾಗ ಬಟ್ಟೆ ಬಿಚ್ಚಾಕಿ ಬನಿಯನ್ ಮತ್ತು ಅಂಡರ್ ವೇರ್ ನಲ್ಲಿ ಓಡಾಡಿದ ಶಾಸಕ | ಆಸಕ್ತರು ಫೋಟೋ ನೋಡಿ !!

ರೈಲಿನಲ್ಲಿ ಪ್ರಯಾಣಿಸುವಾಗ ಬಟ್ಟೆ ಬಿಚ್ಚಾಕಿ ಬನಿಯನ್ ಮತ್ತು ಅಂಡರ್ ವೇರ್ ನಲ್ಲಿ ಓಡಾಡಿದ ಶಾಸಕ | ಆಸಕ್ತರು ಫೋಟೋ ನೋಡಿ !!

6 comments

ಜನಪ್ರತಿನಿಧಿಗಳು ಯಾವಾಗಲೂ ಸಾರ್ವಜನಿಕರಿಗೆ ಮಾದರಿಯಾಗಿರಬೇಕು. ಆದರೆ ಇಲ್ಲಿ ಜನಪ್ರತಿನಿಧಿಯೊಬ್ಬರು ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದೊಂದು ಬಾಕಿ. ಅಷ್ಟಕ್ಕೂ ಆತ ಮಾಡಿದ್ದಾದರೂ ಏನು?.

ಬಿಹಾರದ ಆಡಳಿತಪಕ್ಷವಾದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಗುರುವಾರ ರೈಲಿನಲ್ಲಿ ಪ್ರಯಾಣಿಸುವಾಗ, ಬೋಗಿಯಲ್ಲಿ ಬನಿಯನ್ ಮತ್ತು ಅಂಡರ್‌ವೇರ್‌ನಲ್ಲಿ ಓಡಾಡುತ್ತಿದ್ದುದು ಕಂಡುಬಂದಿದ್ದು, ಇದೀಗ ಎಲ್ಲೆಡೆ ಇವರ ಫೋಟೋ ವೈರಲ್ ಆಗಿದೆ.

ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ ಶಾಸಕ ಗೋಪಾಲ್ ಮಂಡಲ್ ಅವರು ಪಟ್ನಾದಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ಆ ಸಮಯದಲ್ಲಿ ತಮ್ಮ ಎಸಿ ಕೋಚ್‌ನಲ್ಲಿ ಬಿಳಿ ಬನಿಯನ್ ಮತ್ತು ಅಂಡರ್ ವೇರ್ ಮಾತ್ರ ತೊಟ್ಟು ಓಡಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇತರ ಪ್ರಯಾಣಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು, ಜಗಳದ ಪ್ರಮೇಯ ಎದುರಾಗಿತ್ತು. ಅದಲ್ಲದೆ ಸಹಪ್ರಯಾಣಿಕರು ಶಾಸಕರ ನಡವಳಿಕೆ ಬಗ್ಗೆ ದೂರು ಕೂಡ ನೀಡಿದ್ದರು ಎಂದು ತಿಳಿದುಬಂದಿದೆ.

ರೈಲ್ವೆ ಪೊಲೀಸ್ ಮತ್ತು ಟಿಟಿಇ, ಎರಡೂ ಕಡೆಯವರ ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ಈಸ್ಟ್ ಸೆಂಟ್ರಲ್ ರೈಲ್ವೆ ಸಿಪಿಆರ್ ಒ ರಾಜೇಶ್ ಕುಮಾರ್ ತಿಳಿಸಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ.

ಮತ್ತೊಂದೆಡೆ ಮಂಡಲ್ ಅವರು ತಾವು ಆ ರೀತಿ ಓಡಾಡಿದ್ದಕ್ಕೆ ತಮ್ಮ ಹೊಟ್ಟೆ ಕೆಟ್ಟಿದ್ದದ್ದೇ ಕಾರಣ ಎಂದು ಸಮಜಾಯಿಷಿ ನೀಡಿದ್ದಾರೆ. “ಪ್ರಯಾಣದ ವೇಳೆ ನನ್ನ ಹೊಟ್ಟೆ ಕೆಟ್ಟಿದ್ದರಿಂದ ನಾನು ಒಳಉಡುಪುಗಳನ್ನು ಮಾತ್ರ ಧರಿಸಿದ್ದೆ” ಎಂದು ತಿಳಿಸಿರುವ ವಿಡಿಯೋವನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟ್ ಮಾಡಿದೆ.

You may also like

Leave a Comment