Home » ನೆಟ್ಟಣ ರೈಲ್ವೆ ಸ್ಟೇಷನ್ ಪಕ್ಕದ ಗುಡ್ಡದಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

ನೆಟ್ಟಣ ರೈಲ್ವೆ ಸ್ಟೇಷನ್ ಪಕ್ಕದ ಗುಡ್ಡದಲ್ಲಿ ಪತ್ತೆಯಾದ ಮೃತದೇಹದ ಗುರುತು ಪತ್ತೆ

0 comments

ಕಡಬ : ಸುಬ್ರಹ್ಮಣ್ಯ ಸಮೀಪದ ನೆಟ್ಟಣ ರೈಲ್ವೇ ನಿಲ್ದಾಣದ ಸಮೀಪ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.ಈ ಮೃತದೇಹದ ಗುರುತು ಪತ್ತೆಯಾಗಿದೆ.

ಪಕ್ಕದ ಗುಡ್ಡದಲ್ಲಿ ಮಲಗಿರುವ ಸ್ಥಿತಿಯಲ್ಲಿ ಈ ಮೃತದೇಹ ಪತ್ತೆಯಾಗಿದೆ.ಬಾಯಿಯಲ್ಲಿ ರಕ್ತದ ಕಲೆ ಕಾಣಿಸಿಕೊಂಡಿದೆ.ಸ್ಥಳದಲ್ಲಿ ದೊರೆತ ದಾಖಲೆ ಪ್ರಕಾರ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಪತಂಜಲಿನಗರದ ದಿ.ಶಿವಲಿಂಗಯ್ಯರ ಪುತ್ರ ರಾಜಶೇಖರ್ ಎಂದು ಹೇಳಲಾಗಿದೆ.

ಎಸ್.ಬಿ.ಐ ಇನ್ಸೂರೆನ್ಸ್ನ ಕುಣಿಗಲ್ ಬ್ರಾಂಚಿನ ಲೈಫ್ ಮಿತ್ರ ಎಂಬ ಐಡಿ ಕಾರ್ಡ್ ಪತ್ತೆಯಾಗಿದೆ.

ಸ್ಥಳೀಯರು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು,ಪೊಲೀಸರು ಪರಿಶೀಲನೆ ನಡೆಸಿ,ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಸ್ಥಳದಲ್ಲಿ ದೊರೆತ ದಾಖಲೆ ಪ್ರಕಾರ ಇವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

You may also like

Leave a Comment