Home » ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು

ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು

by Praveen Chennavara
0 comments

ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟ ಘಟನೆ ಬದಿಯಡ್ಡ ಸಮೀಪದ ಮುಂಡೋಡು ಕಲ್ಲಕಟ್ಟದಲ್ಲಿ ಬುಧವಾರ ಸಂಭವಿಸಿರುವುದಾಗಿ ವರದಿಯಾಗಿದೆ.

ಕಲ್ಲಕಟ್ಟಿದ ನಾಸರ್ ಎಂಬವರ ಪುತ್ರ ಶಿಹಾಝ್ (6) ಮೃತ ಬಾಲಕ,

ಸೈಕಲ್‌ನಲ್ಲಿ ಹೊರಗಡೆ ತೆರಳಿದ್ದ ಬಾಲಕ ದಾರಿ ಮಧ್ಯೆ ನೀರು ತುಂಬಿದ ಹೊಂಡಕ್ಕೆ ಬಿದ್ದಿದ್ದು, ಬಾಲಕನ ಕೂಗಾಟ ಕೇಳಿ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ ಹೊಂಡದಿಂದ ಬಾಲಕನನ್ನು ಮೇಲಕ್ಕೆತ್ತಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಶಿಹಾಝ್ ಅದಾಗಲೇ ಮೃತಪಟ್ಟಿದ್ದರೆನ್ನಲಾಗಿದೆ.

ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment